ಸಾಹಿತ್ಯ

ಕೊರೊನಾ_ನರಕ (ಕವನ)

ಧರೆಗೆ ಸದ್ದಿಲ್ಲದೆ
ಸುದ್ದಿ ಮಾಡಿತೊಂದು ಮಹಾಮಾರಿ
ಹೊಡೆದೋಡಿಸೋಣ
ಛಲದಿ ನಾವೆಲ್ಲ ಸೇರಿ || 1 ||

ನಮಗಿದು ಪ್ರಕೃತಿ
ನೀಡಿದ ಎಚ್ಚರಿಕೆ ಗಂಟೆ
ಬಿಟ್ಟಿಬಿಡಿ ಇನ್ನಾದರೂ
ದುರ್ಬುದ್ಧಿಯ ತಂಟೆ || 2 ||

ಜಾತಿಮತ ಮರೆತು
ಕೈಗೊಳ್ಳಿ ಅದರ ನಿರ್ನಾಮಕೆ
ಅನುದಿನ ಮೆರೆಯಲಿ
ನಮ್ಮ ಈ ಬುದ್ದಿವಂತಿಕೆ || 3 ||

ಮನಬಂದಂತೆ ನೀವು
ಉಗುಯದಿರಿ ಅಲ್ಲಿ ಇಲ್ಲಿ
ಮುಂದಾಗುವುದು
ನಮ್ಮ ಬದುಕು ಚೆಲ್ಲಾಪಿಲ್ಲಿ || 4 ||

ಇರಲಿ ನಮ್ಮ ನಡುವೆ
ಸಾಮಾಜಿಕ ಅಂತರ
ಕೊರತೆಯಾಗದಿರಲಿ ಎಂದು
ಪ್ರೀತಿ ವಿಶ್ವಾಸದ ಭಾರ || 5 |||

ಮನೆಯೊಳಗೆ ಇದ್ದರೇನೇ
ಕಾಣುವುದು ಸುಖ ಸಂಸಾರ
ಬೀದಿಗೆ ಬಂದಿರೋ
ಆಗುವಿರಿ ಎಲ್ಲರಿಂದ ತಾತ್ಸರ || 6 ||

ತಿರುಗಲೇಬೇಕಾದರೇ
ಇರಲಿ ಮುಖಗವಸು
ಇಲ್ಲವಾದಲ್ಲಿ ಅಗುವುದು
ಬಾಳು ಹೊಲಸು || 7 ||

ಸ್ವಚ್ಛತೆಗೆ ತೊಳೆಯಿರಿ
ಆಗಾಗೈ ಕೈ ಕಾಲು
ನಿತ್ಯ ಚಟುವಟಿಕೆಯಲಿ
ಇರಲಿ ಇದರ ಸಿಂಹ ಸಾಲು || 8 ||

ಬರಲಿ ಮನದಲಿ
ಬದ್ದತೆಯ ಹಠ
ನಿಸರ್ಗ ನೀಡೀತು
ನಮಗೊಂದು ಮರೆಯಲಾಗದ ಪಾಠ || 9 ||

ಡಾ. ರಾಘವೇಂದ್ರ ಉಪಾಧ್ಯಾಯ,

Leave a Reply

Your email address will not be published. Required fields are marked *

Back to top button
error: Content is protected !!