ಮಲ್ಪೆ : ಸಮುದ್ರ ಪಾಲಾಗಿದ್ದ ಓರ್ವ ವಿದ್ಯಾರ್ಥಿಯ ಮೃತದೇಹ ಇಂದು ಬೆಳಗ್ಗೆ ಪತ್ತೆ
ಮಲ್ಪೆ: ಹೂಡೆ ಸಮೀಪದ ಬೀಚ್ ನಲ್ಲಿ ನೀರಿಗೆ ಇಳಿದಿದ್ದ ಮಣಿಪಾಲದ ಎಂಐಟಿ ವಿದ್ಯಾರ್ಥಿಗಳಲ್ಲಿ ಓರ್ವ ಸಮುದ್ರ ಪಾಲಾಗಿದ್ದ ಆತನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು,ಹೈದರಾಬಾದ್ ಮೂಲದ ವಿದ್ಯಾರ್ಥಿ ಶ್ರೀಕರ್ ಎಂದು ಗುರುತಿಸಲಾಗಿದೆ.ಈ ಘಟನೆಯಲ್ಲಿ ಓಟ್ಟು ಮೂವರು ವಿಧ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ.
ಮಣಿಪಾಲದ ಐಸಿಎಎಸ್ ನ ಒಟ್ಟು 15 ಮಂದಿ ವಿದ್ಯಾರ್ಥಿ ಗಳು ರವಿವಾರ ಸಂಜೆ ಹೂಡೆ ಬೀಚ್ ಗೆ ಬಂದಿದ್ದರು. ಈ ವೇಳೆ ಸಮುದ್ರದಲ್ಲಿ ಆಡುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಎನ್ನಲಾಗಿದ್ದು,ಅದರಲ್ಲಿ ಬೆಂಗಳೂರು ಮೂಲದ ನಿಶಾಂತ್ ಹಾಗೂ ಷಣ್ಮುಗ ಎಂಬವರನ್ನು ಮೇಲಕ್ಕೆ ತರಲಾಯಿತು. ತೀವ್ರ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಅವರು ಇಬ್ಬರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ತಡರಾತ್ರಿವರೆಗೂ ನಾಪತ್ತೆಯಾದ ವಿದ್ಯಾರ್ಥಿಗಾಗಿ ಹುಡುಕಾಟ ಮುಂದುವರಿಸಲಾಗಿತ್ತು.ಮೃತದೇಹ ಇಂದು ಬೆಳಗ್ಗೆ ಅಲ್ಲೇ ಸಮೀಪದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣವು ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.