ರಾಷ್ಟ್ರೀಯ

ಪ್ರೇಮಿಗಳಿಗೆ ರಾಖಿ ಕಟ್ಟಿಸಿದ ಭಜರಂಗದಳ

ಮೊರಾದಾಬಾದ್14 : ವ್ಯಾಲೆಂಟೈನ್ಸ್ ಡೇ ದಿನದಂದು ಪಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದ ಪ್ರೇಮಿಗಳನ್ನು ಹಿಡಿದು ಭಜರಂಗದಳದ ಕಾರ್ಯಕರ್ತರು ಅವರಿಗೆ ಪರಸ್ಪರ ರಾಖಿ ಕಟ್ಟಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ಸಮೀಪ ಉದ್ಯಾನವನವೊಂದರಲ್ಲಿ ಪ್ರೇಮಿಗಳ ದಿನದಂದು ಅನೇಕ ಜೋಡಿಗಳು ತಿರುಗಾಡುತ್ತಿದ್ದವು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಭಜರಂಗ ದಳ ಸಂಘಟನೆಯ ಸದಸ್ಯರ ಗುಂಪು ಪ್ರೇಮಿಗಳತ್ತ ಓಡೋಡಿ ಬಂದು ಅವರನ್ನು ಹಿಡಿಯಲು ಪ್ರಯತ್ನಿಸಿದೆ.
ಆಗ ಅಲ್ಲಿದ್ದ ಪ್ರೇಮಿಗಳು ಚೆಲ್ಲಾಪಿಲ್ಲಿಯಾಗಿದ್ದು, ಭಜರಂಗ ದಳದ ಸದಸ್ಯರನ್ನು ಕಂಡು ಜೋಡಿಗಳು ಪರಸ್ಪರ ಬೇರ್ಪಟ್ಟು ಅಲ್ಲಿಂದ ಕಣ್ತಪ್ಪಿಸಲು ಯತ್ನಿಸಿದ್ದಾರೆ. ಈ ವೇಳೆ ಒಂದು ಜೋಡಿಯನ್ನು ಹಿಡಿದ ಭಜರಂಗ ದಳದ ಸದಸ್ಯರು ಅವರನ್ನು ವಿಚಾರಿಸಲು ಆರಂಭಿಸಿದ್ದಾರೆ.

ಅವರು ಆ ಜೋಡಿಯನ್ನು ವಿಚಾರಿಸಿದಾಗ ಸಂಬಂಧಿಕರು ಅಲ್ಲ, ಪ್ರೇಮಿಗಳು ಎಂದು ತಿಳಿದು ಬಂದಿದ್ದು, ಅದಾಗಲೇ ರಾಖಿ ಹಿಡಿದುಕೊಂಡೇ ಬಂದಿದ್ದ ಭಜರಂಗ ದಳ ಸದಸ್ಯರು ಆ ಪ್ರೇಮಿಗಳಿಗೆ ಬಲವಂತವಾಗಿ ರಾಖಿ ಕಟ್ಟಿಸಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಪತಿ- ಪತ್ನಿಯರನ್ನು ಹೊರತುಪಡಿಸಿದರೆ ಎಲ್ಲಾ ಸಹೋದರಿಯರು ನಮಗೆ ತಾಯಿ ಮತ್ತು ಸಹೋದರಿಯರಂತೆ, ಭಾರತದಲ್ಲಿ ನಿಮ್ಮ ಹೆಂಡತಿಯನ್ನು ಹೊರತುಪಡಿಸಿ ಪ್ರತಿಯೊಬ್ಬ ಮಹಿಳೆಯನ್ನು ನಿಮ್ಮ ಸಹೋದರಿಯಂತೆ ಕಾಣಬೇಕು. ಹಾಗಾಗಿ ನಾವು ಪಾರ್ಕ್‌ಗೆ ಹೋಗಿ ಲವರ್ಸ್‌ಗಳನ್ನು ಹಿಡಿದು ಅವರಿಗೆ ರಾಖಿ ಕಟ್ಟಿಸಿದ್ದೇವೆ’ ಎಂದು ರಾಷ್ಟ್ರೀಯ ಭಜರಂಗ ದಳದ ಉತ್ತರ ಪ್ರದೇಶ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ರೋಹನ್ ಸಕ್ಸೇನಾ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!