ವಿಶೇಷ ಲೇಖನಗಳು

ಸ್ತನ ತೆರಿಗೆ ಪದ್ಧತಿ ! ಎಂಥಾ ಕ್ರೂರಿಗಳು ?

“ಯಾತ್ರಾ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ  ದೇವತಾಃ “

ಅಂದರೆ ಎಲ್ಲಿ ಸ್ತೀಯರನ್ನು ಪೂಜಿಸುತ್ತೇವೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ  ಸಂಸ್ಕ್ರತಿ ನಮ್ಮದು . ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಗೌರವ ನೀಡುವಷ್ಟು ಬೇರೆ ಯಾವ ಧರ್ಮದಲ್ಲಿ ಕೂಡ ನೀಡುವುದಿಲ್ಲ,ಆದರೆ ತುಂಬಾ  ವರ್ಷಗಳ ಹಿಂದೆ  ಸ್ತನ ತೆರಿಗೆ  ಎಂಬ ಕೆಟ್ಟ ಪದ್ದತಿ  ಇತ್ತು ಎಂದು  ತಿಳಿಸಲು ವಿಷಾದವಾಗುತ್ತದೆ .

ಕೇರಳದ ರಾಜರಾಗಿದ್ದ ನಂಬೂದರಿಗಳು, ಕೆಳ ವರ್ಗಗಳ ಮಹಿಳೆಯರು ತಮ್ಮ ಮೈ ಮುಚ್ಚಿಕೊಳ್ಳಲು ತೆರಿಗೆಯನ್ನು ಕಟ್ಟಬೇಕೆಂದು ಅತಿಕ್ರೂರವಾದ ಅಮಾನವೀಯ ಕಾನೂನನ್ನು 17, 18,19 ನೇ ಶತಮಾನಗಳಲ್ಲಿ ಜಾರಿಗೊಳಿಸಿದ್ದರು.ಇದು ಸ್ತನ ತೆರಿಗೆ ಎಂದು ಇತಿಹಾಸದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು.

ಮೈಸೂರುಹುಲಿ ಟಿಪ್ಪುಸುಲ್ತಾನ್ ನು ಕೇರಳದ ಮಲಬಾರ್ ಪ್ರಾಂತ್ಯದ ಮೇಲೆ ಅನೇಕ ಬಾರಿ ದಾಳಿ ಮಾಡಿ, ಈ ನಂಬೂದರಿಗಳನ್ನು ಬಗ್ಗುಬಡಿದು, ಈ ಅಮಾನವೀಯ ಪದ್ಧತಿಯನ್ನು ತನ್ನ ಕಾಲದಲ್ಲಿ ನಿಷೇಧಿಸಿದ್ದನು.ಟಿಪ್ಪುಸುಲ್ತಾನನ ಮರಣದ ನಂತರ ಮತ್ತೆ ಸ್ತನ ತೆರಿಗೆ ಪದ್ಧತಿಯು ಜಾರಿಗೆ ಬಂದಿತು.

ಕೆಳವರ್ಗದ ಈಳವ(ಈಡಿಗ) ಜಾತಿಗೆ ಸೇರಿದ್ದ ನಂಗೇಲಿ ಎಂಬ ಮಹಿಳೆಯು ತನ್ನ ದೇಹವನ್ನು ಪೂರ್ತಿ ಮುಚ್ಚಿಕೊಂಡಿರುತ್ತಾಳೆ. ಇದಕ್ಕಾಗಿ, ನಂಬೂದರಿ ರಾಜರುಗಳು ತೆರಿಗೆಯನ್ನು ವಸೂಲಿ ಮಾಡಲು ತಮ್ಮ ಸೈನಿಕರನ್ನು ಅವಳ ಮನೆಯ ಬಳಿ ಕಳುಹಿಸಿದಾಗ, ಆ ಮಹಾತಾಯಿ ತನ್ನ ಸ್ತನವನ್ನೇ ಕುಯ್ದು ಒಂದು ಬಾಳೆ ಎಲೆಯಲ್ಲಿಟ್ಟು ಇದೇ ತೆರಿಗೆ ಎಂದು ತೋರಿಸುತ್ತಾಳೆ. ಆದರೆ ಆಕೆಯು ಅತಿಯಾದ ರಕ್ತಸ್ರಾವದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ನಂಗೇಲಿಯ ಚಿತೆಗೆ ಹಾರಿ ಆಕೆಯ ಪತಿಯೂ ಪ್ರಾಣಾರ್ಪಣೆ ಮಾಡುತ್ತಾನೆ. ನಂಗೇಲಿಯ ಊರು ಮುಲ (ಮೊಲೆ )ಪರಂಬು ಎಂದು ಆ ಬಳಿಕ ಕರೆಯಲ್ಪಟ್ಟಿತು .

ನಂಗೇಲಿಯ ಈಳವ ಸಮಾಜದಿಂದ ಬಂದಂತಹ ನಾರಾಯಣ ಗುರುಗಳು ಈ ಅಮಾನುಷ ಪದ್ಧತಿಯ ವಿರುದ್ಧ ಹೋರಾಡುತ್ತಾರೆ. ಇವರ ಹೋರಾಟವನ್ನು ಪರಿಗಣಿಸಿ ಅಂದಿನ ಬ್ರಿಟಿಷ್ ಸರ್ಕಾರವು ಈ ಸ್ತನತೆರಿಗೆ ಪದ್ಧತಿಯನ್ನು 19 ನೇ ಶತಮಾನದ ಅಂತ್ಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.

ಆ ಮಹಾತಾಯಿ ನಂಗೇಲಿಯು ಪ್ರಾಣ ಬಿಟ್ಟ ಸ್ಥಳದಲ್ಲಿ, ಆಕೆಯ ವಿಗ್ರಹವನ್ನು ನಿಲ್ಲಿಸಿ, ಆರಾಧಿಸುತ್ತಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker