ವಿಶೇಷ ಲೇಖನಗಳು

ವಾಟ್ಸ್ಆ್ಯಪ್ ಹೇಗೆ ಹಣಗಳಿಸುತ್ತೆ ಗೊತ್ತಾ ?ಇಲ್ಲಿದೆ ಮಾಹಿತಿ

ವಾಟ್ಸ್ಆ್ಯಪ್ ಅತ್ಯಂತ ವೇಗವಾಗಿ ಸಂದೇಶ ರವಾನೆ ಮಾಡುತ್ತದೆ. ಈಗಿನ ಜನ ವಾಟ್ಸ್ಆ್ಯಪ್  ಫೇಸ್ ಬುಕ್ ಬಳಕೆ ಇಲ್ಲದೆ  ಜೀವನವೇ ಸಾಧ್ಯ ಇಲ್ಲಎಂಬುವಷ್ಟರಮಟ್ಟಿಗೆ ಅದುಪ್ರಭಾವ ಬೀರಿದೆ.ವಾಟ್ಸಪ್ಪ್ ನಲ್ಲಿ ಜಾಹಿರಾತು ಇರಲ್ಲ ಹಾಗಾದ್ರೆ ವಾಟ್ಸಪ್  ಗೆ ಹೇಗೆ ಹಣ ಬರುತ್ತೆ ಎನ್ನುವುದು ಮನಸಿನಲ್ಲಿರಬಹುದು ಅಲ್ಲವೇ?

ಆರಂಭದಲ್ಲಿ  ವಾಟ್ಸಪ್ಪ್ ನಲ್ಲಿ  ವಾರ್ಷಿಕ ಶುಲ್ಕ ಪಾವತಿ ವಿಧಾನವಿತ್ತು. ಆದರೆ , ಫೇಸ್ ಬುಕ್ ಖರೀದಿ ಮಾಡಿದ ಬಳಿಕ ಅದೂ ಸಹ ಇಲ್ಲ…!ವಾಟ್ಸ್ಆ್ಯಪ್ ಅನ್ನು ಫೇಸ್ ಬುಕ್ ಖರೀದಿ ಮಾಡಿದ್ದು  19 ಬಿಲಿಯನ್ ಡಾಲರ್ ಗೆ ಇದರಲ್ಲಿಯೇ ತಿಳಿಯುತ್ತೆ ವಾಟ್ಸಪ್ಪ್ ನ ಮೌಲ್ಯ .

ನಾವು ಮಾಡಿದ ಪ್ರತಿಯೊಂದು ಸಂದೇಶ ಕೂಡ ಅಮೆರಿಕಾದಲ್ಲಿರುವ ಸರ್ವರ್ ಗೆ ಹೋಗಿ, ಅಲ್ಲಿಂದ ರವಾನೆ ಆಗುತ್ತದೆ. ಅಲ್ಲಿ ಎಲ್ಲವೂ ಸಂಗ್ರಹವಾಗಿರುತ್ತದೆ. ಈ ಡೇಟಾ ಇ-ಕಾಮರ್ಸ್ ಮೊದಲಾದ ಸಂಸ್ಥೆಗಳಿಗೆ ಚಿನ್ನದ ಗಣಿಯಂತೆ ಕೆಲಸ ಮಾಡುತ್ತದೆ ಜನರ ಸ್ಥಿತಿ ಯಾವ ರೀತಿ ಇದೆ ಎಂದು ತಿಳಿಯಲು ಈ ಡೇಟಾ ನೆರವಾಗುತ್ತದೆಯಂತೆ.ವಾಟ್ಸ್ಆ್ಯಪ್ ಅನ್ನು ಬಳಸಿಕೊಂಡು ಫೇಸ್ ಬುಕ್ ತನ್ನ ಜಾಹಿರಾತುಗಳನ್ನು ಮತ್ತಷ್ಟು ಟಾರ್ಗೆಟ್ ಮಾಡುತ್ತದೆ.ವಾಟ್ಸ್ಆ್ಯಪ್ ನಿಂದಾಗಿ ಫೇಸ್ಬುಕ್ ಕೂಡ ಅನುಕೂಲವಾಗಿದೆ.

ಇತ್ತೀಚೆಗೆ ವಾಟ್ಸ್ಆ್ಯಪ್ ಮತ್ತೊಂದು ವಿಧಾನ ಹುಡುಕಿಕೊಂಡಿದೆ. ಸಾಮಾನ್ಯವಾಗಿ, ಲಕ್ಷಾಂತರ ಗ್ರಾಹಕರನ್ನು ಹೊಂದಿರುವ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವುದಕ್ಕಾಗಿ ಟೆಲಿಕಾಂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಎಸ್ಎಂಎಸ್ ಕಳುಹಿಸುತ್ತಿರುತ್ತವೆ. ಇದಕ್ಕೆ ಟೆಲಿಕಾಂ ಕಂಪನಿಗಳು ದರ ನಿಗದಿ ಮಾಡಿರುತ್ತವೆ.

ಟೆಲಿಕಾಂ ಕಂಪನಿಗಳ ಬದಲಿಗೆ ವಾಟ್ಸ್ಆ್ಯಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವಂತೆ ಇಂಥ ಕಂಪನಿಗಳನ್ನು ವಾಟ್ಸಾಪ್ ಅಪ್ರೂವ್ ಮಾಡುತ್ತಿದೆ. ಉದಾಹರಣೆಗೆ, ನೀವು ವಿಮಾನ ಟಿಕೆಟ್ ಬುಕ್ ಮಾಡಲು ಹೋಗುತ್ತೀರಿ. ನೀವು ಟಿಕೆಟ್ ಬುಕ್ ಮಾಡಿದ ಏರ್ ಲೈನ್ಸ್ ನಿಮಗೆ ಟಿಕೆಟ್ ವಿವರಗಳನ್ನು ಎಸ್ಎಂಎಸ್ ಮಾಡುತ್ತದೆ. ಆದರೆ ವಾಟ್ಸ್ಆ್ಯಪ್ ಜೊತೆಗೆ ಒಪ್ಪಂದ ಮಾಡಿಕೊಂಡ ಕಂಪನಿಯು ನಿಮಗೆ ಎಸ್ಎಂಎಸ್ ಕಳುಹಿಸುವುದರ ಬದಲಿಗೆವಾಟ್ಸ್ಆ್ಯಪ್ ಮೂಲಕ ಕಳುಹಿಸುತ್ತದೆ. ಅದನ್ನು ನಿಮಗೆ ಟಿಕೆಟ್ ಪಿಡಿಎಫ್ ಸಿಗುತ್ತದೆ. ಟಿಕೆಟ್ ವಿವರ ಸಂದೇಶದ ರೂಪದಲ್ಲೂ ಸಿಗುತ್ತದೆ.

ಅದೇ ರೀತಿ ಬುಕ್ ಮೈ ಶೋನಲ್ಲಿ ನೀವು ಸಿನಿಮಾ ಟಿಕೆಟ್ ಬುಕ್ ಮಾಡಿದಾಗ ಅದು ವಾಟ್ಸಪ್ ಗೆ ಮಾಹಿತಿ ಕಳುಹಿಸಿರೋದನ್ನು ನೀವು ನೋಡಿರುತ್ತೀರಿ.ಫೇಸ್ ಬುಕ್ ವಾಟ್ಸಾಪ್ ನ್ನು ಖರೀದಿಸಿದ ನಂತರ ಫೇಸ್ಬುಕ್ನ ಲಾಭದಲ್ಲಿ ಹೆಚ್ಚಳವಾಗಿದೆ. ಇದರರ್ಥ ಇಷ್ಟೇ. ವಾಟ್ಸಾಪ್ನ ಡೇಟಾ ಬಳಸಿಕೊಂಡು ಫೇಸ್ಬುಕ್ ಲಾಭ ಮಾಡಿಕೊಳ್ಳುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!