ಆರೋಗ್ಯ
Trending

ಯಾವೆಲ್ಲ ಕಾಯಿಲೆ ಗೆ ಮೂಲಂಗಿ ರಾಮಬಾಣ ವಾಗಿದೆ ಎಂಬುದರ ಬಗ್ಗೆ ಮಾಹಿತಿ ತಿಳಿಯಲು ಓದಿ !

ಚೇಳು ಕಚ್ಚಿದರೆ ವಿಷ ಏರದಂತೆ ತಡೆಯಲು ಮೂಲಂಗಿಯನ್ನು ಹೀಗೆ ಬಳಸಬೇಕು ಮತ್ತು ಈ ಹತ್ತು ರೋಗಗಳಿಗೆ ರಾಮಬಾಣ ಮೂಲಂಗಿ.

1.ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.

2.ಚರ್ಮದ ಆರೋಗ್ಯಕರ ತೇವಾಂಶವನ್ನು ಮೂಲಂಗಿ ಕಾಪಾಡಿ ಕಾಂತಿಯುಕ್ತಗೊಳಿಸುತ್ತದೆ. ಒಣಚರ್ಮ, ದದ್ದು, ಬಿರುಕುಗಳ ಶಮನಕ್ಕೆ ಮೂಲಂಗಿಯನ್ನು ಹಾಲಿನಲ್ಲಿ ಅರೆದು ಫೇಸ್ಪ್ಯಾಕ್ ಹಾಕುವುದು ಉಪಯುಕ್ತ.

3.ಜ್ವರದಿಂದ ದೇಹದಲ್ಲಿ ತಾಪಮಾನ ತೀವ್ರವಾಗಿದ್ದರೆ ಹಸಿ ಮೂಲಂಗಿಯ ರಸಕ್ಕೆ ಉಪ್ಪು ಬೆರೆಸಿ ಕುಡಿದರೆ ಇಳಿಮುಖವಾಗುತ್ತದೆ. ಜೇನ್ನೊಣ ಕಡಿತದ ನೋವು ಮತ್ತು ಬಾವು ಇಳಿಯಲು ಮೂಲಂಗಿಯ ರಸದ ಲೇಪನ ಪರಿಣಾಮಕಾರಿಯೆನಿಸಿದೆ.

4.ಮೂಲಂಗಿಯಲ್ಲಿರುವ ಮೈರೊಸಿನೇಸ್, ಡಯಸ್ಟೇಟ್, ಎಮಿಲೇಸ್, ಎಸ್ಟೆರೇಸ್ ಕಿಣ್ವಗಳು ಪಿತ್ಥಕೋಶದ ಸೋಂಕು ಮತ್ತು ಹುಣ್ಣುಗಳನ್ನು ನಿವಾರಿಸುತ್ತವೆ.

5.ಹಳದಿ ಕಾಮಾಲೆ(ಜಾಂಡಿಸ್) ರೋಗ ಬಂದಾಗ ರಸದ ಸೇವನೆ ಮಾಡಿದರೆ ರೋಗವನ್ನು ಶೀಘ್ರವಾಗಿ ಗುಣಪಡಿಸಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಪಿತ್ಥಕೋಶದ ಕಲ್ಲನ್ನು ಕರಗಿಸುತ್ತದೆ. ಪಿತ್ಥ ಜನಕಾಂಗದ ರಕ್ಷಣೆಗೆ ತುಂಬ ಸಹಕಾರಿ.

6.ಆಹಾರದಲ್ಲಿರುವ ಪ್ರೊಟೀನ್ ಮತ್ತು ಕೊಬ್ಬನ್ನು ತ್ವರಿತವಾಗಿ ಅರಗಿಸಲು ಅಗತ್ಯವಾದ ಪಿತ್ಥರಸವನ್ನು ಹೆಚ್ಚು ಸ್ರವಿಸುತ್ತದೆ.

7.ಇದರ ರಸ ಸೇವನೆಯನ್ನು ಆರು ದಿನಗಳ ಕಾಲ ಮಾಡಿದರೆ ಕೊಲೆಸ್ಟ್ರಾಲ್ ಪ್ರಮಾಣ ಕಡಮೆಯಾಗುತ್ತದೆ. ಬೊಜ್ಜು ಇಳಿಯುತ್ತದೆ.

8.ಜೀರ್ಣಕ್ರಿಯೆಗೆ ನೆರವಾಗುವ ಕಾರ್ಬೋಹೈಡ್ರೇಟ್ಸ್ ಮೂಲಂಗಿಯಲ್ಲಿದೆ. ಹೆಚ್ಚುನೀರನ್ನು ಹೀರಿಕೊಳ್ಳಲು ಕರುಳಿಗೆ ಸಹಕರಿಸುವ ಮೂಲಕ ವಿಸರ್ಜನ ದ್ರವ್ಯಗಳನ್ನು ಮೃದುಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

9.ಪೈಲ್ಸ್ ಬಾಧೆಯಿರುವವರಿಗೆ ಉಪಯುಕ್ತ. ಕರುಳಿನ ಚಲನೆಯನ್ನು ಹೆಚ್ಚಿಸುವ ನಾರು ಮೂಲಂಗಿಯಿಂದ ಸಿಗುತ್ತದೆ.

10.ಹೊಟ್ಟೆಯ ಹುಳಗಳನ್ನು ಕೊಲ್ಲುತ್ತದೆ.

11.ಮೂತ್ರ ವಿಸರ್ಜನೆಯನ್ನು ಹೆಚ್ಚಿಸಿ ಉರಿಮೂತ್ರ, ಉರಿಯೂತ, ಮೂತ್ರಕೋಶದ ಸೋಂಕುಗಳನ್ನು ಮೂಲಂಗಿಯ ರಸ ಗುಣಪಡಿಸುತ್ತದೆ.

12.ಹಸಿವು ಹೆಚ್ಚಿಸುತ್ತದೆ.

13.ಅಗ್ನಿ ಮಾಂದ್ಯ, ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ನಿವಾರಿಸುತ್ತದೆ.

14.ದೇಹದ ತೂಕ ನಷ್ಟವಾಗದಂತೆ ನೋಡಿಕೊಳ್ಳುತ್ತದೆ.

15.ಜವಾಹರಲಾಲ ನೆಹರೂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಶೋಧನೆಗಳು ಮೂಲಂಗಿಯು ಹೊಟ್ಟೆ, ಬಾಯಿ, ಮೂತ್ರಪಿಂಡ ಮತ್ತು ಸ್ತನ ಕ್ಯಾನ್ಸರ್ ರೋಗಗಳ ಜೀವಕೋಶಗಳನ್ನು ನಾಶಪಡಿಸಲು ಶಕ್ತವಾಗಿದೆ ಎನ್ನುತ್ತವೆ.

16.ಸಿರಿನ ದುರ್ಗಂಧ ದೂರವಿಡಲು ಮೂಲಂಗಿ ಸೇವನೆ ಪರಿಣಾಮಕರವಾಗಿದೆ. ಮೂಗು ಮತ್ತು ಗಂಟಲುಗಳ ಶ್ವಾಸವನ್ನು ಪರಿಶುದ್ಧಗೊಳಿಸುತ್ತದೆ. ಅಸ್ತಮಾ, ಶ್ವಾಸಕೋಶದ ಕೆರಳಿಕೆ, ಅಲರ್ಜಿ, ನೆಗಡಿಯಂತಹ ಸೋಂಕುಗಳಿಗೂ ಅದು ಉತ್ತಮ ಔಷಧವಾಗುತ್ತದೆ.

17.ರಕ್ತದಲ್ಲಿರುವ ತ್ಯಾಜ್ಯ ವಿಷಗಳನ್ನು ಹೊರದೂಡಲು ಮೂಲಂಗಿ ಸಮರ್ಥವಾಗಿದೆ. ತಾಜಾ ಆಮ್ಲಜನಕವನ್ನು ಪೂರೈಸಿ ರಕ್ತದ ಹರಿವನ್ನು ಸುಗಮಗೊಳಿಸುವ ಮೂಲಕ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ನಿತ್ಯವೂ ಮೂಲಂಗಿ ಸೇವಿಸುವವರಿಗೆ ಹೃದಯಾಘಾತದ ಸಂಭವ ಕಡಿಮೆ. ರಕ್ತದಲ್ಲಿರುವ ಸಕ್ಕರೆಯ ಗುಣಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹದವರಿಗೂ ಉಪಕಾರಿಯಾಗಿದೆ. ಅತಿಸಾರಕ್ಕೂ ಅದರ ಎಲೆಗಳ ಕಷಾಯ ಮದ್ದಾಗುತ್ತದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!