ವಿಶೇಷ ಲೇಖನಗಳು
Trending

ತಗಡು ಶೀಟ್ ಮನೆ ವಾಸದಿಂದ ಕ್ಯಾನ್ಸರ್..!

ಗ್ರಾಮೀಣ ಭಾಗದ ಬಡವರಿಗೆ ನೆರಳು ನೀಡುತ್ತಿರುವ ಅಸ್ಬೆಸ್ಟೋಸ್ (ಎಸಿಸಿ) ಶೀಟುಗಳಿಂದ ಕ್ಯಾನ್ಸರ್ ಬರುತ್ತದೆ ಎಂಬ ಸತ್ಯ ಅನೇಕರಿಗೆ ಗೊತ್ತಿಲ್ಲ ಬಡವರು ಕಡಿಮೆ ಬೆಲೆಗೆ ಸಿಗುತದೆಯೆಂದು ಖರೀದಿಸುತ್ತಾರೆ.. ಹಾಗೆಯೇ ಈ ಶೀಟುಗಳ ಉತ್ಪಾದನೆ, ಮಾರಾಟ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿ 7 ವರ್ಷಗಳು ಕಳೆದಿವೆ ಎಂಬ ಅರಿವೂ ಹಲವರಿಗಿಲ್ಲ. ಈ ಶೀಟುಗಳ ಬಳಕೆಯನ್ನು ವಿಶ್ವದ 60 ರಾಷ್ಟ್ರಗಳಲ್ಲಿ ನಿರ್ಬಂಧಿಸಲಾಗಿದೆ. ಈಗಲೂ ಈ ಶೀಟುಗಳು ಕಾನೂನುಬಾಹಿರವಾಗಿ ರಾಜ್ಯದಲ್ಲಿ ಮಾರಾಟವಾಗುತ್ತಲೇ ಇವೆ. ವೈಜ್ಞಾನಿಕ ಭಾಷೆಯಲ್ಲಿ ಅಸ್ಬೆಸ್ಟೋಸ್ ಶೀಟ್ಸ್ ಎಂದು ಕರೆಸಿಕೊಳ್ಳುವ ಎಸಿಸಿ ಶೀಟು ಕಡಿಮೆ ಬೆಲೆಗೆ ಸಿಗುವುದರಿಂದ ಅವುಗಳನ್ನು ಬಳಸಿ ಬಡವರು ಮನೆ ಕಟ್ಟಿಕೊಳ್ಳುತ್ತಲೇ ಇದ್ದಾರೆ.

ಸಿಮೆಂಟ್ ಶೀಟುಗಳ ತಯಾರಿಕೆಗೆ ಅಸ್ಬೆಸ್ಟೋಸ್ ಮತ್ತು ಫೈಬರ್ ಬಳಸಲಾಗಿರುತ್ತದೆ. ವರ್ಷಗಳು ಕಳೆದಂತೆ ಶೀಟುಗಳಲ್ಲಿನ ಫೈಬರ್ ಕಣಗಳು ಉಸಿರಾಟದ ಮೂಲಕ ಮಾನವನ ದೇಹಕ್ಕೆ ಪ್ರವೇಶಿಸಿದರೆ ವಾಪಸ್ ಬರುವುದಿಲ್ಲ. ದೇಹದಲ್ಲಿ ರಾಸಾಯನಿಕ ಕ್ರಿಯೆಯಿಂದಾಗಿ ಮಿಸಲೋಥಿಯಮ್ ಕ್ಯಾನ್ಸರ್, ಲಂಗ್ಸ್ ಇನ್​ಫ್ಲೇಮ್ ಲಂಗ್ಸ್ ಮತ್ತು ಹೊಟ್ಟೆ ಕ್ಯಾನ್ಸರ್, ಕಿಡ್ನಿ ಹಾಗೂ ಧ್ವನಿಪೆಟ್ಟಿಗೆ ಕ್ಯಾನ್ಸರ್ ಬರುತ್ತದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಅನೇಕ ಅಧ್ಯಯನಗಳಲ್ಲಿ ದೃಢಪಟ್ಟಿದೆ.

ಅಮೆರಿಕದಲ್ಲಿ ಕಳೆದ 15 ವರ್ಷಗಳಲ್ಲಿ 2 ಲಕ್ಷ ಜನ ಕ್ಯಾನ್ಸರ್​ಗೆ ಬಲಿಯಾಗಿದ್ದು, ಎಲ್ಲರೂ ಇದೇ ಹಾನಿಕಾರಕ ಶೀಟುಗಳಿಂದಾಗಿ ಕ್ಯಾನ್ಸರ್​ಗೆ ತುತ್ತಾಗಿರುವ ಅಂಶ ಅಧ್ಯಯನದಲ್ಲಿ ಹೊರ ಬಿದ್ದಿದೆ. ಅಮೆರಿಕದಲ್ಲಿ ಎಸಿಸಿ ಶೀಟುಗಳ ಉತ್ಪಾದನೆ-ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಕಬ್ಬಿಣ ಹಾಗೂ ಥರ್ವಕೋಲ್ ಶೀಟ್​ಗಳಿಗೆ ಹೋಲಿಸಿದರೆ ಕಡಿಮೆ ಬೆಲೆ ಎಂಬ ಕಾರಣಕ್ಕೆ ಈ ಶೀಟುಗಳನ್ನು ಹೆಚ್ಚಾಗಿ ಖರೀದಿಸಲಾಗುತ್ತಿದೆ.

ತಗಡು ಶೀಟುಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂಬ ಅರಿವು ಗ್ರಾಮೀಣ ಭಾಗದ ಜನರಲ್ಲಿಲ್ಲ. ಮೊದಲು ಜನರಲ್ಲಿ ಅರಿವು ಮೂಡಿಸಬೇಕು. ಜತೆಗೆ ಸಿಮೆಂಟ್ ಶೀಟುಗಳ ಬದಲಿಗೆ ಹೆಂಚು ಅಥವಾ ಪರ್ಯಾಯ ವಸ್ತುಗಳನ್ನು ಬಳಸುವ ಬಗ್ಗೆ ಸರ್ಕಾರ ಜಾಗೃತಿ ಮೂಡಿಸಬೇಕು. ತಪ್ಪಿದರೆ ಮುಂದಿನ 15 ವರ್ಷಗಳಲ್ಲಿ ಮನೆಗೊಬ್ಬಕ್ಯಾನ್ಸರ್ ರೋಗಿ ಹುಟ್ಟಿಕೊಳ್ಳುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!