ವಿಶೇಷ ಲೇಖನಗಳು

ಕರೋನಾ ಔಷಧಿ ಕಂಡುಹಿಡಿದ ಡಾ . ಗಿರಿಧರ ಕಜೆ ಮಾಡಿದ ತಪ್ಪು ?: ಗೌರೀಶ್ ಶಾಸ್ತ್ರಿ-Udupi News

ಡಾ. ಗಿರಿಧರ ಕಜೆ ಇತ್ತೀಚೆಗಿನ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಯಾಕೆಂದು ಸಾಮಾನ್ಯವಾಗಿ ಕರ್ನಾಟಕದ ಜನರಿಗೆ ತಿಳಿದಿರುವಂತಹುದು. ಕೊರೋನ ಸಂಬಂಧಿಸಿದ ಕಾಯಿಲೆಗೆ ಉಪಯುಕ್ತ ಔಷಧ ಸಂಶೋಧನೆ ನಡೆಸಿದ್ದೂ ಅಲ್ಲದೇ ಅದು ಪರಿಣಾಮಕಾರಿ ಎಂಬುದನ್ನು ಸಾರ್ವತ್ರಿಕವಾಗಿ ಸಾಬೀತು ಮಾಡಿದ್ದಾರೆ . ಹಾಗೆ ಸಾಬೀತು ಆದ ತಕ್ಷಣ ಸರಕಾರದ ಬೆನ್ನಿಗೆ ಬಿದ್ದು ಇದನ್ನು ಜನರಿಗೆ ತಲುಪಿಸಲು ಸಹಕರಿಸಿ ಎಂದು ಭಿನ್ನವಿಸಿಕೊಂಡರು. ಇದಕ್ಕೆ ಸರಕಾರದಿಂದ ಗ್ರೀನ್ ಸಿಗ್ನಲ್ ಏನೋ ಸಿಕ್ಕಿತು . ಡಾ. ಗಿರಿಧರ ಕಜೆ ಅವರಿಗೆ ಸಮಾಧಾನದೊಂದಿಗೆ ತುಂಬಾ ಖುಷಿ ಕೊಟ್ಟಿರಬೇಕು. ಸತತ ಪರಿಶ್ರಮದ ಫಲವಾಗಿ ತಾವು ಕಂಡುಹಿಡಿದ ಔಷಧ ಸುಲಭವಾಗಿ ಜನರಿಗೆ ಲಭ್ಯವಾಗಿ ಬಿಡಬಹುದು ಎಂಬುದು ಅವರ ಲೆಕ್ಕಾಚಾರ ಆಗಿತ್ತು.

ಈ ಔಷಧದ ಮೂಲಕ ಜನರು ಕೋರೋನದಿಂದ ಉಂಟಾದ ಭಯ, ಸಂಕಟದಿಂದ ಮುಕ್ತರಾಗಬಹುದು ಎಂಬ ಸಾರ್ಥಕತೆಯ ಭಾವ ಅವರಲ್ಲಿ ಮೂಡಿತ್ತು. ಆದರೆ ಡಾ . ಕಜೆ ಅವರ ಲೆಕ್ಕಾಚಾರ ಬುಡಮೇಲಾದುದು ಇಲ್ಲೇ ಆಗಿದೆ . ಸರಕಾರ ಯಾವ ಕೆಲಸ ಸಮರ್ಪಕವಾಗಿ ಮಾಡಿದ್ದು ಇದೆ ಹೇಳಿ ? ಅಲ್ಲದೆ ಸರಕಾರದ ಜನ ಪ್ರತಿನಿಧಿಗಳಾಗಲಿ ಸಚಿವರಾಗಲೀ ಈ ಈಡೀ ಸರಕಾರಿ ಕೃಪಾಪೋಷಿತ ನಾಟಕ ಮಂಡಳಿ ಸ್ವಲಾಭ ಇಲ್ಲದೇ ಯಾವುದನ್ನೇ ಆದರೂ ಸ್ವೀಕರಿಸಲು ಸಾಧ್ಯವೇ ? ತಾವು ಕಂಡು ಹಿಡಿದ ಔಷಧವನ್ನು ಸರಕಾರದ ಸುಪರ್ದಿ ಗೆ ವಹಿಸಿದರು ಯಾಕೆ ? ಅದು ಹೆಚ್ಚಿನ ಜನರಿಗೆ ತಲುಪಿಸುವ ಕಾರ್ಯ ಸರಕಾರಕ್ಕೆ ಸಾಧ್ಯ ಎನ್ನುವ ಮಹತ್ವಾಕಾಂಕ್ಷೆ ಡಾ . ಕಜೆ ಅವರದ್ದು ಆಗಿತ್ತೇನೋ ನಿಜ. ಅದು ಅವರಲ್ಲಿ ಇರುವ ಪ್ರಾಮಾಣಿಕ ಪ್ರಯತ್ನ ಮತ್ತು ಒಳ್ಳೆಯ ಮನಸ್ಸು .

ಆದರೆ ಸರಕಾರ ಅಷ್ಟು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಸ್ವಲ್ಪ ಮಟ್ಟಿಗೆ ಅನುಮಾನ ಸಂಶಯ ಅವರಿಗೆ ಬರಬೇಕಿತ್ತು ಅದು ಆ ಸಂದರ್ಭದಲ್ಲಿ ಅವರಿಗೆ ಬರಲಿಲ್ಲ ಅನಿಸುತ್ತದೆ . ಸರಕಾರ ಅವರಿಂದ ಔಷಧ ಪಡೆದು ಕೊಂಡಿತು . ಆದರೆ ಅದಕ್ಕೆ ಒಂದಷ್ಟು ಸರಕಾರದವರು ಷರತ್ತುಗಳು ಡಾ . ಕಜೆ ಅವರಿಗೆ ವಿದಿಸಿ ಪಡೆದು ಕೊಂಡಿದೆ ಎಂಬುದನ್ನು ಕೇಳಿ ತಿಳಿದೆ. ಅದು ಹೀಗಿದೆಯಂತೆ ಅವರೇ ಸಂಶೋಧನೆ ನಡೆಸಿದ ಔಷಧ ಮಾರಾಟ ಮಾಡುವ ಅಥವಾ ಬಡವರಿಗೆ ಉಚಿತವಾಗಿ ನೀಡುವ ಅನುಮತಿ ಅವರಿಗೆ ಈಗ ಇಲ್ಲವಂತೆ . ಆ ಔಷಧ ವಿತರಣೆಯ ಸಂಪೂರ್ಣ ಸ್ವಾತಂತ್ರ ಸರಕಾರದ ಪಾಲಿಗೆ . ಇಂತಹ ಗಂಭೀರ ಪರಿಸ್ಥಿತಿಯ ಸ್ವರೂಪದಲ್ಲಿಯೂ ಸರಕಾರ ಈ ವ್ಯಾಪಾರಿಕರಣದ agreement ಯಾಕೆ ಮಾಡಿಕೊಂಡಿರಬೇಕು ? ಡಾ . ಕಜೆ ಅವರಿಂದ ಈ ಷರತ್ತುಗಳ ವಿದಿಸಿ ಕಸಿದು ಕೊಂಡು ಅದನ್ನು ಜನಕ್ಕೆ ತಲುಪಿಸುವ ಪ್ರಯತ್ನವನ್ನೂ ಮಾಡದೆ ಆ ಔಷಧವನ್ನು ಯಾವ ಗೋಡೌನ್ ನಲ್ಲಿ ಬಚ್ಚಿಡಲಾಗಿದೆ ಎಂಬುದನ್ನು ಜನ ಸರಕಾರವನ್ನು ಪ್ರಶ್ನಿಸುವಂತಾಗಿದೆ.

ನಾನು ಕೇಳಿ ತಿಳಿದಂತೆ 160 ರೂ ಮತ್ತು 9 ರೂಪಾಯಿ ಔಷಧದ ಮೌಲ್ಯ. ತೀರಾ ಕೈಗೆ ಎಟಕುವ ರೀತಿಯಲ್ಲಿ ಡಾ . ಕಜೆ ಅವರು ಜನರ ಸ್ವಾಸ್ಥ್ಯ ದ ದೃಷ್ಟಿಯಿಂದ ಯಾವುದೇ ಸ್ವಾರ್ಥ ಸಾಧನೆಗಾಗಿ ಹಣದ ಲಾಲಸೆಗಾಗಿ ಮಾಡಿದವರಲ್ಲ. ಆದರೆ ಅವರ ಇಷ್ಟು ಪರಿಶ್ರಮದ ಸಾಧನೆಯನ್ನು ಸರಕಾರಕ್ಕೆ ಸುಲಭವಾಗಿ ಹಸ್ತಾಂತರಿಸಿದ್ದು ಅವರು ಮಾಡಿದ ದೊಡ್ಡ ತಪ್ಪು ಎಂಬುದು ನನ್ನ ಅನಿಸಿಕೆ . ಅವರು ಮಾಡಿದ್ದೆಲ್ಲವೂ ಈಗ ನೀರಲ್ಲಿ ಮಾಡಿದ ಹೋಮದಂತಾಗಿದೆ. ಸರಕಾರ ಜನರಿಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿದ್ದು ನಿಜ ಆದರೆ ಅದು ಎಲ್ಲಿ ? ಯಾರಿಗೆ ? ಯಾವಾಗ? ಸಿಕ್ಕಿದೆ ಹೇಳಲು ಸಾಧ್ಯವೇ ? ನಾನು ಇದರ ಬೆನ್ನ ಹಿಡಿದು ಅನೇಕ ಸರಕಾರೀ ಆಸ್ಪತ್ರೆ ವಿಚಾರಿಸಿದರೆ ಯಾರಿಗೂ ಅದು ಲಭ್ಯ ಇಲ್ಲ ಎಂಬ ವಿಚಾರ ಮನಗಂಡೆ.

ಡಾ . ಕಜೆ ಅವರು ಸರಕಾರಕ್ಕೆ ದಾನಕ್ಕೆ ಕೊಟ್ಟಾಗಲೇ ಅಂದುಕೊಂಡೆ. ಆಧುನಿಕ ಔಷಧ ಮತ್ತು ಪ್ರೈವೇಟ್ ಆಸ್ಪತ್ರೆಗೆ ಆಗುವ ನಷ್ಟವಾದರೆ ಸರಕಾರದ ಜನಪ್ರತಿನಿಧಿಗಳಿಗೂ ನಷ್ಟ ಸಂಭವಿಸುತ್ತದೆ. ಅಲ್ಲಿ ಸಿಗುವ ಕಮಿಷನ್ ರೂಪದಲ್ಲಿನ ಲಾಭ ಜನ ಹಿತಕ್ಕಾಗಿ ಪುಗಸಟ್ಟೆ ಈ ಔಷಧದಿಂದ ಸಿಗಲು ಸಾಧ್ಯವೇ ಇಲ್ಲ. ಹೀಗಾಗಿ ಅವರಿಗೂ ಮಾರಾಟ ಮಾಡದಂತೆ ಸರಕಾರ ಖರೀದಿ ನಾಟಕ ಮಾಡಿ ಅದನ್ನು ಮುಚ್ಚಿಟ್ಟು ಡಾ. ಕಜೆ ಅವರ ಶ್ರಮವನ್ನು ನಿರರ್ಥಕಗೊಳಿಸಿದ ಕ್ರಮ ಸರಿಯಲ್ಲ.ಈ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು. ಔಷಧ ಎಲ್ಲಾ ಅಂಗಡಿಯಲ್ಲಿ ಮತ್ತು ಸರಕಾರೀ ಆಸ್ಪತ್ರೆಯಲ್ಲಿ ಮುಕ್ತವಾಗಿ ಇಲ್ಲವೇ ಮೂಲ ಬೆಲೆಯಲ್ಲಿಯೇ ಸಿಗುವಂತೆ ಮಾಡಬೇಕು .

ಜನರು ಪಕ್ಷ ಭೇದ ಮರೆತು ಸರಕಾರವನ್ನು ಪ್ರಶ್ನೆ ಮಾಡುವಂತಾಗಬೇಕು. ಕೇಂದ್ರ ಸರ್ಕಾರದ ಗಮನಕ್ಕೆ ಡಾ . ಕಜೆ ಅವರು ತರಬೇಕು . ಅವರೊಂದಿಗೆ ಮಾಡಿಕೊಂಡ ಎಗ್ರಿಮೆಂಟ್ ಮರಳಿ ಪಡೆದು ಸ್ವತಃ ಡಾ . ಕಜೆ ಅವರ ಮೂಲಕ ಅದರ ಮಾರಾಟದ ಅಧಿಕಾರ ಆಯಾ ಸ್ಥಳೀಯ ಸೇವಾ ಸಂಸ್ಥೆಗಳಿಗೆ ತಲುಪಿಸುವಂತೆ ಮಾಡಲಿ. ಔಷಧ ಅಂಗಡಿಯಲ್ಲಿ ಕೂಡಾ ಈ ಔಷಧ ಇದ್ದರೂ ಇಲ್ಲ ಅನ್ನುವ ಸಾಧ್ಯತೆ ಇದೆ . ಹೀಗಾಗಿ ಜನ ಈ ಬಗ್ಗೆ ಜಾಗೃತರಾಗಿ ಸರಕಾರವನ್ನು ತರಾಟೆಗೆ ತೆಗೆದು ಕೊಳ್ಳುವಂತಾಗಲಿ ಎಂದು ಹಾರೈಸುವೆ.

 

ಗೌರೀಶ್ ಶಾಸ್ತ್ರಿ ಹಿರಿಯ ಪತ್ರಕರ್ತರು. +919483005204

Related Articles

Leave a Reply

Your email address will not be published. Required fields are marked *

Back to top button
error: Content is protected !!