ಆರೋಗ್ಯ

ಮೂಲವ್ಯಾಧಿ ನಿವಾರಕ ಗಡ್ಡೆ

ಇದಕ್ಕೆ ಸುವರ್ಣ ಗಡ್ಡೆ, ಪಂಜರಗಡ್ಡೆ, ಸೂರಣಗಂಧ, Amorphopallus ಇತ್ಯಾದಿಯಾಗಿ ಕರೆಯುತ್ತಾರೆ. ಇದು ಮೂಲವ್ಯಾಧಿಗೆ ದಿವ್ಯೌಷಧಿ ಆಗಿರುವದರಿಂದ ಇದಕ್ಕೆ “ ಅರ್ಶೋಘ್ನ “ ಎನ್ನುವರು. ಇದು ಗಡ್ಡೆರೂಪದ ತರಕಾರಿಗಳಲ್ಲಿಯೇ ಅತಿ ಶ್ರೇಷ್ಠವಾಗಿರುವದರಿಂದ ವೈದ್ಯಗ್ರಂಥಗಳಲ್ಲಿ “ ಸರ್ವೇಷಾಂ ಕಂದಶಾಕಾನಾಂ ಸೂರಣಃ ಶ್ರೇಷ್ಠ ಉಚ್ಯತೇ ” ಎಂದು ವರ್ಣಿತವಾಗಿದೆ‌

ಇದರ ಬಳಕೆಯಿಂದ ಮೊಳೆ (ಮೊಳಕೆಠ
ಟ ಮೂಲವ್ಯಾಧಿ ರೋಗವನ್ನು ಯಾವದೇ ಆಪರೇಷನ್ ಇಲ್ಲದೇ ಕೇವಲ ಇದರ ಸತ್ವ (ಚೂರ್ಣ) ಸೇವನೆಯಿಂದ ಸಂಪೂರ್ಣವಾಗಿ ಗುಣ ಪಡಿಸಿಕೊಳ್ಳ ಬಹುದಾಗಿದೆ. ಹೇಗೆಂದರೆ, ಸೂರಣಗಡ್ಡೆಯ ಸಿಪ್ಪೆ ತೆಗೆದು ಸಾಮಾನ್ಯ ಗಾತ್ರದ ಹೋಳುಗಳನ್ನಾಗಿ ಮಾಡಿಕೊಂಡು ತುರಿ ಮಣೆಯಲ್ಲಿ ತುರಿದು ಆ ತುರಿಯನ್ನು ಮಿಕ್ಸಿಯಲ್ಲಿ ಅಥವಾ ಗ್ರೈಂಡರ್ ನಲ್ಲಿ ಹದವಾಗಿ ಬೀಸಲು ಅನುಕೂಲವಾಗುವಷ್ಟು ನೀರು ಹಾಕಿಕೊಂಡು ಚನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ಬೀಸುವದು. ನಂತರ ತೆಳುವಾದ ವಸ್ತ್ರವನ್ನು ಪಾತ್ರೆಯ ಬಾಯಿಗೆ ಕಟ್ಟಿದ ದೊಡ್ಡ ಪಾತ್ರೆಯಲ್ಲಿ ಈ ಕಲ್ಕಕ್ಕೆ ಇನ್ನಷ್ಟು ನೀರು ಸೇರಿಸಿ ಸೋಸುವದು . ಹೀಗೆ 2-3 ಬಾರಿ ನೀರು ಸೇರಿಸಿ ಸೋಸಿದ ಮೇಲೆ ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿದ ಆ ತಿಳಿ ನೀರನ್ನು ಹಾಗೇ 4-5 ತಾಸುಗಳ ಕಾಲ ಹಣಿಯಲು ಬಿಡುವದು. ನಂತರ ನಿಧಾನವಾಗಿ ಮೇಲಿನ ನೀರನ್ನು ಚಲ್ಲುತ್ತಾ ಬರಲು ಪಾತ್ರೆಯ ತಳದಲ್ಲಿ ಬಿಳಿ ಹಿಟ್ಟು ಸಂಗ್ರಹವಾಗಿರುವದು ಕಂಡುಬರುವದು. ಈ ಹಿಟ್ಟನ್ನು ಬಿಸಿಲಿನಲ್ಲಿ ಒಣಗಿಸಿ ಸೀಸದ ಬಾಟಲಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವದು. ಇದುವೇ ಮೂಲವ್ಯಾಧಿ ನಿವಾರಕ ಮನೆ ಮದ್ದು. ಪ್ರತಿ ದಿನ ಎರಡು ಬಾರಿ ಒಂದರಿಂದ ಎರಡು ಚಮಚದಷ್ಟು ಒಂದು ಲೋಟ ನೀರಿನಲ್ಲಿ ಸೇವಿಸಿದರೆ ಮೂಲವ್ಯಾಧಿ ಮೊಳಕೆ ಒಣಗಿ ಉದುರಿ ಹೋಗುವದು. 2-3 ವಾರಗಳಲ್ಲಿ ಸಂಪೂರ್ಣ ಗು‌ಣಮುಖರಾಗುವರು. ಇದು ನನ್ನ ಅನುಭವಸಿದ್ಧ ಮನೆಮದ್ದು. ರಕ್ತ ಮೂಲವ್ಯಾಧಿಗೂ ಸಹ ಪರಿಣಾಮಕಾರಿ. ಇದನ್ನು ಬಳಸಿ ‘ ಸೂರಣವಟಿ ’ ಮೂಲವ್ಯಾಧಿ ನಿವಾರಕ ಮಾತ್ರೆ ತಯಾರಿಸುವರು. ಆದರೆ , ಜಠರ, ಕರುಳು, ಚರ್ಮ ರೋಗವುಳ್ಳವರು ವೈದ್ಯರ ಸಲಹೆ ಪಡೆದು ಸೇವಿಸಬೇಕು. ಸೂರಣಗಡ್ಡೆಯನ್ನು ಪಲ್ಯ , ಸಾಂಬಾರ್ ಮಾಡಿ ಸೇವಿಸುವದರಿಂದ ಗುಲ್ಮ, ಹೊಟ್ಟೆಯ ಊತ, ಕೃಮಿರೋಗ, ವಾತರೋಗ,ಕೆಮ್ಮು, ದಮ್ಮು ಇತ್ಯಾದಿ ನಿವಾರಣೆ. 4-5 ಕಿಲೋ ಸುವರ್ಣ ಗಡ್ಡೆಯಿಂದ ಕೇವಲ 200-300 ಗ್ರಾಮ್ ನಷ್ಟು ಸತ್ವವನ್ನು ಸಂಗಹಿಸ ಬಹುದಾಗಿರುವದರಿಂದ ಸ್ವಲ್ಪ ದುಬಾರಿಯಾಗಿ ಕಂಡರೂ ಸಂಪೂರ್ಣ ಫಲಕಾರಿ. .ಸುವರ್ಣ ಗಡ್ಡೆಯನ್ನು ತೆಳುವಾಗಿ ಕತ್ತರಿಸಿ, ಬೇಯಿಸಿ ಬೆಲ್ಲದಲ್ಲಿ ಪಾಕ ತಯಾರಿಸಿದ ಸಿಹಿ ತಿನಸು ತಿನ್ನಲು ಬಹು ಸೊಗಸು.

a. ಟಿ. ಭಟ್ಟ, ಬಗ್ಗೋಣ.
(ದೇವಿಸುತ)

Related Articles

Leave a Reply

Your email address will not be published. Required fields are marked *

Back to top button
error: Content is protected !!