ವಿಶೇಷ ಲೇಖನಗಳು

ಬ್ರಾಹ್ಮೀ ಮುಹೂರ್ತ ಅಂದರೇನು? ಆ ಸಮಯದಲ್ಲಿ ಯಾಕೆ ನಿದ್ರೆಯಿಂದ ಏಳಬೇಕು ನೋಡಿ

ಪುರಾಣ ವೇದಗಳಲ್ಲಿ ಬ್ರಾಹ್ಮೀ ಮುಹೂರ್ತ ಎಂಬುದೊಂದು ಮುಹೂರ್ತವಿದೆ. ಎಲ್ಲಾ ರೀತಿಯ ಧಾರ್ಮಿಕ ವಿಧಿ ಹಾಗೂ ಪುಸ್ತಕಗಳಲ್ಲಿ ಇದರ ಉಲ್ಲೇಖವಿದೆ. ಹಾಗಾದರೆ ಈ ಬ್ರಾಹ್ಮೀ ಮುಹೂರ್ತ ಅಥವಾ ಬ್ರಹ್ಮ ಮುಹೂರ್ತದ ವಿಶೇಷತೆ ಏನೂ, ಇದರಿಂದ ಪ್ರಯೋಜನವೇನು ಎಂದು ನೀಡಿರುವ ಮಾಹಿತಿಯ ಬಗ್ಗೆ ತಿಳಿಯೊಣ.

ಬ್ರಾಹ್ಮೀ ಮುಹೂರ್ತಂ ಉತ್ತಿಷ್ಟೆತ್
ಸ್ವಸ್ತೋ ರಕ್ಷಾರ್ಥಂ ಆಯುಷಃ
ತಾತ್ರ ಸರ್ವಾರ್ಥ ಸಂಧ್ಯಾರ್ಥಂ
ಸಮೀಕ್ಷ ಮಧುಸೂದನಂ

ಆಯುರ್ವೇದ ಅಂದರೆ ಯಾರೆಲ್ಲರೂತಮ್ಮ ಆಯುಷ್ಯವನ್ನು, ಒಳ್ಳೆಯ ಆರೋಗ್ಯವನ್ನು ಬಯಸುತ್ತಾರೆ ಅವರು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಬ್ರಹ್ಮ ಮುಹೂರ್ತ ಎಂದರೆ ಸೂರ್ಯೋದಯಕಿಂತ ಮೊದಲಿನ ತೊಂಬತ್ತಾರು ನಿಮಿಷಗಳ ಕಾಲ. ಈ ಕಾಲದ ಸದುಪಯೋಗ ಮಾಡಿಕೊಂಡರೆ ಸ್ವಲ್ಪ ದಿನಗಳಲ್ಲಿ ನೀವು ಬಯಸಿದ, ನಿಮ್ಮ ಇಷ್ಟಾರ್ಥಗಳು ಸಿದ್ದಿಸುತ್ತದೆ. ಇದನ್ನು ನೋಡಿ ನೀವು ಆಶ್ಚರ್ಯಗೊಳ್ಳುವುದು ಖಚಿತ. ಇಷ್ಟಪಡುವ ವಿಷಯದಲ್ಲಿ ಹೆಚ್ಚು ತಿಳಿದುಕೊಂಡು ವಿದ್ವಾಂಸರು ಆಗುವುದು ನೋಡಿದರೆ ಬಾಯಿಯ ಮೇಲೆ ಬೆರಳಿಡುವುದು ಖಚಿತ. ಗಿಡಗಳು ಬೇಳೆಯುವ ಪ್ರಶಸ್ತ ಕಾಲ ಇದಾಗಿರುವುದರಿಂದ ಇದನ್ನು ದಿ ಕ್ರಿಯೆಟರ್ ಅವರ್ ಎನ್ನುತ್ತಾರೆ.

ಮನುಸ್ಮೃತಿಯಲ್ಲಿ ಬ್ರಹ್ಮ ಮುಹೂರ್ತದ ಬಗ್ಗೆ ಹೇಳಲಾಗಿದೆ.

ಬ್ರಹ್ಮ ಮುಹೂರ್ತಂ ಉದಯೆತ್ ಧರ್ಮಾರ್ಥ ಚಾಣಚಿಂತಯೆತ್

ಕಾಯಕಾಲೇಚ ಆತತನುಮೇಲಾನ್ ವೇದದ್ವಾರತ್ಮೆಭವ||

ವೇದಗಳ ಅಧ್ಯಯನ ಕಠಿಣವಾಗಿರುತ್ತದೆ ಎನ್ನುತ್ತಾರೆ ಅಂತಹ ವೇದವನ್ನು ಬ್ರಹ್ಮ ಮುಹೂರ್ತದಲ್ಲಿ ಎದ್ದು ಅಧ್ಯಯನ ಮಾಡಬೇಕಂತೆ. ಮನು ಮಹರ್ಷಿಗಳ ಈ ಉಲ್ಲೇಖದ ಹಿಂದೆ ಬಹಳ ದೊಡ್ಡ ಕಾರಣವಿರಬಹುದು. ಹಾಗಾದರೆ ಓದಿಗಾಗಲಿ, ಮೆಡಿಟೆಷನ್ ಗೆ ಆಗಲಿ, ಯೋಚಿಸುವು ಹಾಗೂ ಯೋಗಗಳಿಗೆ ಉಪಯುಕ್ತ ಎಂದು ಹೇಳಲಾಗುವ ಈ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ. ಮೊದಲನೆಯದಾಗಿ ಲಾ ಆಫ್ ಅಟ್ರಾಕ್ಷನ್. ಈ ಸಮಯದಲ್ಲಿ ನಾವೂ ಏನನ್ನು ಯೋಚಿಸುತ್ತೆವೆಯೋ ಅದು ವಾಸ್ತವವಾಗಿ ನಮ್ಮೆದುರು ಇರುತ್ತದೆ. ದಿನವೂ ಯೋಚಿಸುತ್ತೆವೆ ಆದರೆ ಈ ಸಮಯದಲ್ಲಿ ಯೋಚಿಸುವುದಕ್ಕೆ ಏನು ವ್ಯತ್ಯಾಸ ಎಂದು ಯೋಚಿಸಿದರೆ ಅದಕ್ಕೆ ಉತ್ತರದ ಉದಾಹರಣೆಯಾಗಿ ನಮ್ಮ ಗುರಿ ತಲುಪಲು ಹೊರಟರೆ ಬೆಳಗ್ಗಿನ ವೇಳೆಯಲ್ಲಿ ಟ್ರಾಫಿಕ್ ಇರುವುದಿಲ್ಲ, ಮಧ್ಯಾನದ ವೇಳೆಯಲ್ಲಿ ತುಂಬಾ ಟ್ರಾಫಿಕ್ ಇರುತ್ತದೆ. ಯಾವ ಸಮಯ ನಿಮ್ಮ ಗುರಿಯನ್ನು ಬೇಗ ಮುಟ್ಟಬಹುದು. ಖಂಡಿತವಾಗಿಯೂ ಬೆಳಗಿನ ಜಾವ ಟ್ರಾಫಿಕ್ ಇಲ್ಲಿದ ವೇಳೆಯಲ್ಲಿ. ಹಾಗೆಯೆ ಇಲ್ಲಿಯೂ ಉಳಿದ ವೇಳೆಯಲ್ಲಿ ಎಲ್ಲರೂ ಯೋಚಿಸುವುದರಿಂದ ಒಬ್ಬರು ಯೋಚಿಸಿರುವುದು ನಡೆಯಲು ತುಂಬಾ ಸಮಯಬೇಕು.. ಆದರೆ ಬ್ರಾಹ್ಮೀ ವೇಳೆಯಲ್ಲಿ ಕೆಲವೆ ಕೆಲವು ಜನರ ಯೋಚನೆಗಳು ಯುನಿವರ್ಸ್ ತಲುಪುತ್ತವೆ ಇದರಿಂದ ನಿಮ್ಮ ಯೋಚನೆ ಬೇಗ ವಾಸ್ತವವಾಗಿ ಬದಲಾಗುತ್ತದೆ.

ಸೂರ್ಯೋದಯದ ಮೊದಲಿನ ನಲವತ್ತೆಂಟು ನಿಮಿಷ ಎಚ್ಚರವಾಗಿದ್ದರೆ ಜೀವನ ನಿಮ್ಮ ಕಣ್ಣೇದುರೇ ಬದಲಾಗುವುದನ್ನು ನೋಡಬಹುದು. ಇದಕ್ಕೆ ಸಂಬಂಧಿಸಿದಂತೆ ಬೆಂಜಮಿನ್ ಫ್ರಾಂಕ್ಲಿನ್ ಎಂಬ ತತ್ವಜ್ಞಾನಿ ಮಾತುಗಳು ಹೀಗಿವೆ.

“Early to bed and early to rise, makes a man healthy, wealthy and wise” ಎಂದು.. ಇದರ ಅರ್ಥ ಬೇಗ ಮಲಗಿ ಬೇಗ ಏಳುವ ಮನುಷ್ಯ ಆರೋಗ್ಯವಾಗಿಯೂ, ಬುದ್ದಿವಂತನಾಗಿಯೂ ಇರುತ್ತಾನೆ ಎಂದಾಗಿದೆ. ಎರಡನೆಯದಾಗಿ ವಿಶ್ವಶಕ್ತಿ ಅಂದರೆ ಕೊಸ್ಮಿಕ್ ಎನರ್ಜಿ. ನಮ್ಮ ರಾತ್ರಿಯು ನಾಲ್ಕು ಭಾಗಗಳಲ್ಲಿ ಪುರಾಣಗಳಲ್ಲಿ ವಿಂಗಡಿಸಲಾಗಿದೆ ಅವುಗಳು‌ ಸಂಜೆ ಆರರಿಂದ ಒಂಬತ್ತರರವರೆಗೆ ರುದ್ರ ಕಾಲವೆಂದೂ, ಒಂಬತ್ತರಿಂದ ಹನ್ನೆರಡರವರೆಗೆ ರಾಕ್ಷಸ ಕಾಲವೆಂದೂ, ಹನ್ನೆರಡರಿಂದ ಮೂರನ್ನು ಗಂಧರ್ವಕಾಲವೆಂದೂ, ಮೂರರಿಂದ ಆರರವರೆಗೆ ಮನೊಹರ ಕಾಲವೆಂದೂ ವಿಭಾಗಿಸಲಾಗಿದೆ. ರುದ್ರಕಾಲದಲ್ಲಿ ಮಲಗಬಾರದು , ರಾಕ್ಷಸಕಾಲದಲ್ಲಿ ಎಚ್ಚರವಿರಬಾರದು, ಗಂಧರ್ವ ಕಾಲದಲ್ಲಿ ನಿದ್ದೆ ತುಂಬಾ ಆಳವಾಗಿರುತ್ತದೆ ಎಂದೂ ಹಾಗೆಯೇ ಮನೋಹರ ಕಾಲದಲ್ಲಿ ಹೇಗಾದರೂ ನಾವು ಏಳಲೆ ಬೇಕು ಎಂಬ ನಿಯಮ ಮಾಡಿದ್ದಾರೆ. ಯಾಕೆಂದರೆ ಮನೋಹರ ಕಾಲದಲ್ಲಿ ಯುನಿವರ್ಸ್ ನಲ್ಲಿ ವಿಶ್ವಶಕ್ತಿಯ ಸಂಚಾರ ತುಂಬಾ ಹೆಚ್ಚಿರುವುದರಿಂದ ನಮಗೆ ಈ ಕಾಲ ಒಳ್ಳೆಯದು ಎಂಬ ನಂಬಿಕೆ. ಯುನಿವರ್ಸ್ ಅನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಈ ವಿಶ್ವಶಕ್ತಿ ನಾವು ಮಲಗಿರುವಾಗ ಸ್ವಲ್ಪ ಮಟ್ಟಿಗೆ ನಮ್ಮ ಮೆದುಳನ್ನು ಸೇರುತ್ತದೆ. ಅದೆ ನಾವೂ ಧ್ಯಾನದಲ್ಲಿ ತೊಡಗಿದಾಗ ಅತಿ ಹೆಚ್ಚು ಪ್ರಮಾಣದಲ್ಲಿ ವಿಶ್ವಶಕ್ತಿ ನಮ್ಮ ದೇಹದಲ್ಲಿ ಪ್ರವಹಿಸುತ್ತದೆ.
ಈ ಸಮಯದಲ್ಲಿ ಸ್ಪಿರಿಚ್ಯುವಲ್ ಗಳ ಆಭಾಸ ನಮಗೆ ಆಗುತ್ತದೆ. ಇದರಿಂದ ಆಗುವ ಬದಲಾವಣೆಗಳನ್ನು ಏಕಾಗ್ರತೆ, ಸುಪ್ತ ಶಕ್ತಿ, ಚುರುಕುತನ, ಯೋಚಿಸುವ ಗುಣಗಳಿಂದ ಕಾಣಸಿಗುತ್ತದೆ. ಇಂತಹ ಸುಪ್ತಶಕ್ತಿಗಳಿಗಾಗಿಯೆ ಸಾಧುಗಳು ಯೋಗಿಗಳು ಬ್ರಹ್ಮ ಮುಹೂರ್ತದಲ್ಲಿ ಯೋಗಧ್ಯಾನದಲ್ಲಿ ನಿರತರಾಗುವುದು. ಆ ಸಮಯದಲ್ಲಿ ಎಚ್ಚರವಾಗಿದ್ದರೆ ಸಾಕು ಧ್ಯಾನ ಮಾಡಲೆಬೇಕು ಎಂದೆನಿಲ್ಲ ಎಚ್ಚರವಿರುವುದರಿಂದಲೂ ಈ ಶಕ್ತಿಯ ಉಪಯೋಗ ನಿಮಗೆ ಸಿಗುತ್ತದೆ. ಮೂರನೆಯದಾಗಿ ಸರ್ಕೇಡಿಯಂ ರಿದಂ. ನಾವು ಹಾಗೂ ನಮ್ಮ ದೇಹ ಹೇಗೆ ಒಂದಕ್ಕೊಂದು ಬೆಸೆದುಕೊಂಡಿರುತ್ತದೆಯೋ ಹಾಗೆಯೆ ಯುನಿವರ್ಸ್ ಗೂ ನಮಗೂ ಒಂದು ಬಂಧವಿರುತ್ತದೆ. ಉದಾಹರಣೆಗೆ ಸೂರ್ಯನ ಸುತ್ತ ಸುತ್ತವ ಭೂಮಿಯ ಮೇಲೆ ಸೂರ್ಯನ ಮೊದಲಕಿರಣ ಬಿದ್ದಾಗ ಭೂಮಿ ತನ್ನ ಮಾಗ್ನೆಟ್ ಫೀಲ್ಡ್ ಅನ್ನು ಹೆಚ್ಚಾಗಿ ಉತ್ಪಾದನೆ ಮಾಡುತ್ತದೆ.. ಅದರಿಂದ ನಮ್ಮ ಮೆದುಳಿನಲ್ಲಿ ಬೇರೆ ಬೇರೆ ರೀತಿಯ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತದೆ. ನಮಗೆ ಬೆಳಗಾಗಿದೆ ಎಂಬ ಸಂದೇಶ ಕಳಿಸಲು ಶುರುವಾಗುತ್ತದೆ. ಆಯುರ್ವೇದದ ಪ್ರಕಾರ ಯಾರೂ ಹತ್ತುಗಂಟೆಯಿಂದ ಎರಡು ಗಂಟೆಯವರೆಗೂ ಎಚ್ಚರವಿರಬಾರದು. ಆದರೆ ಈ ಮಾತನ್ನೂ ಇವಾಗಿನ ಸಾಮಾಜಿಕ ಜಾಲತಾಣಗಳ ಆಕರ್ಷಣೆಯಲ್ಲಿ ಯಾರೂ ಪಾಲಿಸುವುದಿಲ್ಲ. ನೀರಿನ ಹರಿವಿರುವ ಕಡೆಗೆ ಈಜಿದಲ್ಲಿ ಬೇಗ ದಡ ತಲುಪಬಹುದು. ಹಾಗೇಯೆ ಪ್ರಕೃತಿಯ ಪ್ರಕಾರ ನಡೆದಲ್ಲಿ ಬ್ರಹ್ಮಾಂಡವೂ ನಮ್ಮ ಪರವಾಗಿ ಕೆಲಸ ಮಾಡುತ್ತದೆ.

ನಾಲ್ಕನೆಯದಾಗಿ ಪರಿಶುದ್ದ ಹವಾಮಾನ. ಬ್ರಹ್ಮ ಮುಹೂರ್ತದಲ್ಲಿ ವಾತವರಣ ಬಹಳ ಶುದ್ಧತೆಯಿಂದ ಕೂಡಿರುತ್ತದೆ ಯಾಕೆಂದರೆ ನಲವತ್ತೊಂದು ಶೇಖಡಾ ಆಕ್ಸಿಜನ್ ಪ್ರಕೃತಿಯಲ್ಲಿ ಉತ್ಪತ್ತಿಯಾಗುತ್ತಿರುತ್ತದೆ. ಕೇವಲ ನಾಲ್ಕು ಶೇಕಡಾದಷ್ಟು ಕಾರ್ಬನ್ ಡೈಆಕ್ಸೈಡ್ ಉತ್ಪನ್ನ ಇರುತ್ತದೆ. ನಮ್ಮ ಸುತ್ತಮುತ್ತಲಿನ ಬೀಸುವ ಗಾಳಿಯು ನಮ್ಮನ್ನು ವಿಚಲಿತಗೊಳಿಸುತ್ತದೆ. ಇದರಿಂದಾಗಿ ನಮ್ಮ ಯಾವುದೇ ಕೆಲಸಗಳನ್ನು ಏಕಾಗ್ರತೆಯಿಂದ ಮಾಡಿ ಮುಗಿಸುವುದು ಕಷ್ಟವಾಗುತ್ತದೆ. ಜೊತೆಗೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಐದನೆಯದಾಗಿ ಎನರ್ಜಿ ಸೇವಿಂಗ್. ದಿನ ನಿತ್ಯ ಉಪಯೋಗಿಸದೆ ಇರುವ ನಮ್ಮೊಳಗಿನ ಎನರ್ಜಿಯನ್ನು ಉಪಯೋಗಿಸಿಕೊಳ್ಳಲು ಮಹರ್ಷಿ ಪತಂಜಲಿ ಒಂದು ಸೂತ್ರ ತಿಳಿಸಿದ್ದರೆ ಅದೆನೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಇವುಗಳನ್ನು ಅಷ್ಟಾಂಗಯೋಗ ಸೂತ್ರವೆಂದು ಕರೆಯುತ್ತಾರೆ. ಇದರಲ್ಲಿ ಐದನೆಯದು ಅಂದರೆ ಪ್ರತ್ಯಾಹಾರ ನಮ್ಮ ಪಂಚೆಂದ್ರಿಯಗಳನ್ನು ಉದ್ದೇಶಿಸಿ ಇರುವಂತಹದ್ದು. ಇದರ ಪ್ರಕಾರ ನಮ್ಮ ಎನರ್ಜಿಯನ್ನು ವ್ಯರ್ಥವಾಗದಂತೆ ಪಂಚೆಂದ್ರಿಯಗಳ ಮೂಲಕ ತಡೆಯುವುದು. ಯೋಗಿಗಳು ಅವರ ಇಚ್ಛಾಶಕ್ತಿಗಳ ಮೂಲಕ ಪಂಚೆಂದ್ರಿಯಗಳನ್ನು ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಸಾಮಾನ್ಯರಾದ ನಮಗೆ ಇದು ಸಾಧ್ಯವಿಲ್ಲ ಸಣ್ಣ ಸಣ್ಣ ಶಬ್ದಗಳಿಗೂ ನಮ್ಮ ಮೆದುಳು ಪ್ರತಿಕ್ತಿಯಿಸುತ್ತದೆ. ಆದ್ದರಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವುದರ ಮೂಲಕ ನಮ್ಮ ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು.

 

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker