
ಆಯುರ್ವೇದ ಚಿಕಿತ್ಸೆಯ ಫಲಿತಾಂಶ ನಿಧಾನವಲ್ಲ, ಇದು ಜನಸಾಮಾನ್ಯರು ಆಯುರ್ವೇದ ಚಿಕಿತ್ಸೆ ಬಗ್ಗೆ ಮಾಡಿಕೊಂಡಿರುವ ತಪ್ಪು ಕಲ್ಪನೆ. ಫಲಿತಾಂಶ ಬರೀ ಚಿಕಿತ್ಸೆ ಮೇಲೆ ಅವಲಂಬನೆಯಾಗಿರುವುದಿಲ್ಲ, ರೋಗ ಎಷ್ಟು ಹಳೆಯದು, ರೋಗಿಯ ವಯಸ್ಸು, ಕಾಲ, ಪ್ರಕೃತಿ, ಆಹಾರ, ವಿಹಾರ ಮತ್ತು ಅವರ ನಂಬಿಕೆಯ ಮೇಲೆ ಅವಲಂಬನೆಯಾಗುತ್ತದೆ. ಬೇರೆ ಚಿಕಿತ್ಸಾ ಪದ್ಧತಿಯಿಂದ ಬಹುಬೇಗ ವಾಸಿಯಾಗಬಹುದು ಆದರೆ ಅದು ಸಂಪೂರ್ಣ ಗುಣಮುಖವಾಗಲು ಚಿಕಿತ್ಸೆಯಾಗಿರುವುದಿಲ್ಲ, ಅದು ಲಕ್ಷಣಗಳಿಗೆ ಮಾತ್ರ ಔಷಧಿಯಾಗಿರುತ್ತದೆ.
ಚಿಕಿತ್ಸೆಯ ಫಲಿತಾಂಶ ಬರೀ ಚಿಕಿತ್ಸೆಯ ಮೇಲೆ ಅವಲoಬನೆಯಾಗಿರುವುದಿಲ್ಲ, ಹಾಗಾಗಿ ಆಯುರ್ವೇದ ಚಿಕಿತ್ಸೆಯ ಫಲಿತಾಂಶ ನಿಧಾನವೆಂದು ಹೇಳುವುದು ಸಮಂಜಸವಲ್ಲ.