ರಾಷ್ಟ್ರೀಯ

ಎಟಿಎಂಗಳಲ್ಲಿ ಹಣ ವಿಥ್’ಡ್ರಾ ಶುಲ್ಕ ಹೆಚ್ಚಳ

ನವದೆಹಲಿ: ಬ್ಯಾಂಕ್ ಎಟಿಎಂಗಳಲ್ಲಿ ಹಣ ಪಡೆಯುವ ಶುಲ್ಕವನ್ನು ಹೆಚ್ಚಿಸುವ ಮೂಲಕ ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಶಾಕ್ ನೀಡಿದೆ.

ಇತರ ಬ್ಯಾಂಕ್‌ಗಳ ಎಟಿಎಂನಲ್ಲಿ ಹಣ ವಿತ್‌ಡ್ರಾ ಶುಲ್ಕವನ್ನು ಹೆಚ್ಚಿಸಿದೆ. ಇದರ ಜತೆಗೆ ಹಣಕಾಸೇತರ ವಹಿವಾಟು ಶುಲ್ಕವನ್ನೂ ಹೆಚ್ಚಳ ಮಾಡಿದೆ. 2022ರ ಜನವರಿ 1ರಿಂದ ಹೊಸ ದರ ಅನ್ವಯವಾಗಲಿದೆ.

ಐದು ಉಚಿತ ಎಟಿಎಂ ವಹಿವಾಟು ಕೇವಲ ಮೆಟ್ರೋ ಹೊರತುಪಡಿಸಿದ ಕೇಂದ್ರಗಳಲ್ಲಿ ಲಭ್ಯವಿದೆ. ಆದರೆ ಮೆಟ್ರೋ ಕೇಂದ್ರಗಳಲ್ಲಿ ಇದರ ಮಿತಿ ಮೂರಕ್ಕೆ ಇಳಿಯಲಿದೆ.

ಆರ್‌ಬಿಐ ನಿಯಮದ ಪ್ರಕಾರ, ನಿಮ್ಮ ಬ್ಯಾಂಕ್ ಎಟಿಎಂ ಹೊರತುಪಡಿಸಿ ಇತರ ಬ್ಯಾಂಕ್ ಎಟಿಎಂನಲ್ಲಿ ಆರಂಭಿಕ 5 ಟ್ರಾನ್ಸಾಕ್ಷನ್ ಉಚಿತವಾಗಿದೆ. 5ನೇ ಬಾರಿಗೆ ಹಣ ತೆಗೆಯಲು 20 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದೀಗ ಈ ಶುಲ್ಕವನ್ನು 21 ರೂಪಾಯಿಗೆ ಏರಿಸಲಾಗಿದೆ. ಈ ನಿಯಮವು 2022ರ ಜನವರಿ 1 ರಿಂದ ಜಾರಿಯಾಗಲಿದೆ. ಇಂಟರ್‌ಚೇಂಜ್ ಶುಲ್ಕವಾಗಿ ಗ್ರಾಹಕನ ಬ್ಯಾಂಕ್, ಇತರ ಬ್ಯಾಂಕ್ ಎಟಿಎಂ ಬಳಸಿದ ಬ್ಯಾಂಕ್‌ಗಳಿಗೆ 16 ರೂಪಾಯಿ ಇದ್ದ ಶುಲ್ಕವನ್ನು 17 ರೂ.ಗೆ ಹೆಚ್ಚಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!