ಸಾಹಿತ್ಯ

ಧೀರತಮ್ನನ ಕಬ್ಬ ಮುಕ್ತಕ ಸಂಪುಟ ೩ ಲೋಕಾರ್ಪಣೆ

ದಿನಾಂಕ ೧೬-೧-೨೨ ರ ಭಾನುವಾರ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದ ಬ್ಯಸಿನೆಸ್ ಟಾನಿಕ್ ಖ್ಯಾತಿಯ ೧೫೦ ನೇ ಎಪಿಸೋಡ್ ಪ್ರಯುಕ್ತ ನಡೆದ ಸಮಾರಂಭದಲ್ಲಿ ಡಾ ಸುರೇಶ ನೆಗಳಗುಳಿ ಮಂಗಳೂರು ಇವರ ಒಂಭತ್ತನೆಯ ಕೃತಿ “ಧೀರತಮ್ಮನ ಕಬ್ಬ” ಮುಕ್ತಕ ರೂಪದ ಸಂಕಲನವು

ಕರ್ಣಾಟಕ ಬ್ಯಾಂಕಿನ‌ ಎಂ.ಡಿ.ಸಿ.ಇ.ಒ ಶ್ರೀ ಎಮ್.ಎಸ್ ಮಹಾಬಲೇಶ್ವರ ಇವರ‌ ದಿವ್ಯ ಹಸ್ತದಿಂದ ಲೋಕಾರ್ಪಣೆ ಗೊಂಡಿತು.

ಅವರು ಮಾತನಾಡುತ್ತಾ ಡಿ.ವಿ.ಜಿ ಯವರ ಮಂಕು ತಿಮ್ಮನ ಕಗ್ಗವನ್ನು ಹೋಲುವ ಧೀರತಮ್ಮ ನ ಕಬ್ಬವು ಉತ್ತಮ ನೀತಿ ಹಾಗೂ ಸಾಮಾಜಿಕ ಕಳಕಳಿ ಹೊತ್ತಿರುವ ಮುಕ್ತಕಗಳಾಗಿದ್ದು ಲೇಖಕರಿಗೆ ಉತ್ತಮ ಭವಿಷ್ಯವನ್ನು ಹಾರೈಸಿದರು.
ಖ್ಯಾತ ಲೆಕ್ಕ ಪರಿಶೋಧಕ ಶ್ರೀ ಎಸ್ ಎಸ್ ನಾಯಕ್ ರವರು ಮಂಗಳೂರಿನ ಡಿ.ವಿ.ಜಿ ಎನ್ನುತ್ತಾ ಇನ್ನಷ್ಟು ಮುಕ್ತಕ ಗಳು ಹೊರ ಬರಲಿ ಎಂಬ ಆಶಯ ವ್ಯಕ್ತ ಪಡಿಸಿದರು.
ಬೆಂಗಳೂರಿನ‌ ಸಿ.ಎ. ಅನಿಲ್ ಭಾರದ್ವಾಜ್ ರವರು ತಮ್ಮ ಭಾಷಣದಲ್ಲಿ ಈ ಸಂಕಲನದಲ್ಲಿರುವ ಮುಕ್ತಕ ಗಳನ್ನು ವಾಚಿಸಿ ವಿವರಿಸಿ ಶುಭ‌ ಕೋರಿದರು.
ಕರ್ಣಾಟಕ ಬ್ಯಾಂಕಿನ ಚೇರ್ಮನ್ ಶ್ರೀ ಪ್ರದೀಪ್ ಕುಮಾರ್‌,ಎನ್ ಎಂ ಪಿ.ಟಿ ಚೇರ್ಮನ್ ಡಾ | ವೆಂಕಟ್ರಮಣ ಅಕ್ಕರಾಜು ಹಾಗೂ ಸಿ ಏ ರುದ್ರ ಮೂರ್ತಿ, ಬೆಂಗಳೂರಿನ ಸಿ ಏ ಅನಿಲ್ ಭಾರದ್ವಾಜ್, ಫಿ ಜಾ ಗ್ರೂಪಿನ ಚೇರ್ಮನ್ ಬಿ‌ ಎಮ್ ಫಾರೂಕ್,ದ.ಕ ಹಾಲ ಉತ್ಪಾದಕ ಸಂಘದ ಮುಖ್ಯಸ್ಥ ಶ್ರೀ ರವಿರಾಜ್ ಹೆಗ್ಡೆ ಮತ್ತು ಹ್ಯಾಂಗ್ಯೋ ಐಸ್ ಕ್ರೀಮ್ ನ ಮುಖ್ಯಸ್ಥ ಶ್ರೀ ಪ್ರದೀಪ್ ಜಿ ಪೈಯವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮ ನಿರ್ವಹಣೆಯನ್ನು ಸಿ ಎ ಎಮ್ ಎನ್ ಪೈ ಮತ್ತು ಸಿ ಎ ಯಶಸ್ವಿನಿ,ನಿತಿನ್ ಸಾಲಿಯಾನರು ಮಾಡಿದ್ದರು
ಧೀರತಮ್ಮನ‌ ಕಬ್ಬವು ೨೨೨ ಮುಕ್ತಕಗಳನ್ನು ಒಳಗೊಂಡಿದ್ದು ಶ್ರೀ ವಿ ಬಿ ಕುಳಮರ್ವ ಕುಂಬಳೆಯವರ ಮುನ್ನುಡಿ ಹಾಗೂ ಖ್ಯಾತ ವಿಮರ್ಶಕ ಶ್ರೀ ಅರವಿಂದ ಚೊಕ್ಕಾಡಿಯವರ ಬೆನ್ನುಡಿಯನ್ನು ಒಳಗೊಂಡಿದೆ.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭವೂ ನಡೆದಿದ್ದು ಡಾ ಸುರೇಶ ನೆಗಳಗುಳಿ ಸಹ ಅಂತಹವರಲ್ಲಿ ಒಬ್ಬರಾಗಿದ್ದಾರೆ

ವರದಿ ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ
ಮಂಗಳೂರು ೫೭೫೦೦೯
೯೪೪೮೨೧೬೬೭೪
negalagulis@gmail.com

Leave a Reply

Your email address will not be published. Required fields are marked *

Back to top button
error: Content is protected !!