ಕರಾವಳಿ
ಅರಬಿ ಸಮುದ್ರದಲ್ಲಿ ತೂಫಾನ್ ಸೃಷ್ಟಿ ಆಗಸ್ಟ್ 10 ರವರೆಗೆ ಮೀನುಗಾರಿಕೆ ಸಂಪೂರ್ಣ ನಿಷೇಧ..!
ಮಂಗಳೂರು: ವಾಯು ಭಾರ ಕುಸಿತದಿಂದ ಅರಬ್ಬಿ
ಸಮುದ್ರದಲ್ಲಿ ತೂಫಾನ್ ಸೃಷ್ಟಿಯಾಗಿದ್ದು ಪಶ್ಚಿಮ ಕರಾವಳಿ ತೀರದಲ್ಲಿ ಭಾರೀ ಗಾತ್ರದ ಅಲೆಗಳು ಸೃಷ್ಟಿಯಾಗುತ್ತಿವೆ.
ಇಂದು ಸಂಜೆಯಿಂದ ಉಡುಪಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಎಲ್ಲ ವಿಧದ ಮೀನುಗಾರಿಕೆಯನ್ನು ಆಗಸ್ಟ್ 10 ರ ವರೆಗೆ ನಿಷೇಧಿಸಲಾಗಿದೆ. ಯಾಂತ್ರೀಕೃತ ಮತ್ತು ನಾಡದೋಣಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಮಲ್ಪೆ, ಪಡು ಬಿದ್ರಿ ಮತ್ತು ಕುಂದಾಪುರ ಬಂದರುಗಳಲ್ಲಿ ಚಟುವಟಿಕೆ ಸ್ಥಗಿತಗೊಂಡಿದೆ. ಈ ಮಧ್ಯೆ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರವಾಹ ಪೀಡಿತ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ
ನಡೆಸಲಿದ್ದಾರೆ.