ಕರಾವಳಿ
ಕಡಿಯಾಳಿ: ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ
ಉಡುಪಿ: ವಿಶ್ವ ಹಿಂದೂ ಪರಿಷತ್ ಹಾಗೂ ಮಾತೃ
ಮಂಡಳಿ ಕಡಿಯಾಳಿ ಇದರ ಜಂಟಿ ಆಶ್ರಯದಲ್ಲಿ 38
ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ
ಹಾಗೂ ಕುಂಕುಮಾರ್ಚನೆಯು ಶುಕ್ರವಾರ ಆಗಸ್ಟ್ 5
ರಂದು ಕಾತ್ಯಾಯಿನಿ ಮಂಟಪದಲ್ಲಿ ಜರುಗಿತು.
ಪಾಡಿಗಾರು ಶ್ರೀನಿವಾಸ ತಂತ್ರಿ ಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ
ವಿಧಾನಗಳನ್ನು ಅರ್ಚಕ ವೃಂದದವರು
ನೆರವೇರಿಸಿದರು. ನೂರಾರು ಮುತ್ತೈದೆಯರು
ಸಾಮೂಹಿಕ ಕುಂಕುಮಾರ್ಚನೆ ನಡೆಸಿ
ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡರು.
ಸ ಸಭಾ ಕಾರ್ಯಕ್ರಮದಲ್ಲಿ ಕಡಿಯಾಳಿ
ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ
ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ್ ಆಚಾರ್ಯ, ಮುಖ್ಯ ನಿರ್ವಾಹಕಿ ಶ್ರೀಮತಿ ಪದ್ಮಾ ಆರ್, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ಗೀತಾ ನಾಯಕ್, ನಿರ್ಮಲಾ ಪೈ, ಸುಪ್ರಭಾ ಆಚಾರ್ಯ, ಮಾತೃ ಮಂಡಳಿ ಸದಸ್ಯರು ಹಾಗೂ ವಿವಿಧ ಸಂಘದ
ಪದಾಧಿಕಾರಿಗಳು ಉಪಸ್ಥಿತರಿದ್ದರು.