ಕರಾವಳಿ

ಕಾರ್ಕಳ‌ ಚುನಾವಣೆಯಲ್ಲಿ ಬಂಟ ಅಭ್ಯರ್ಥಿಗಳ ಲಾಭಿ

ಉದಯ್ ಕುಮಾರ್ ಶೆಟ್ಟಿ- ಸುರೇಂದ್ರ ಶೆಟ್ಟಿ ಹಗ್ಗಜಗ್ಗಾಟದಲ್ಲಿ ಕೆದಿಂಜೆ ಸುಪ್ರಿತ್ ಶೆಟ್ಟಿಯತ್ತ ಹೆಚ್ಚಿದ ಹೈಕಮಾಂಡ್ ಒಲವು!

ಕಾರ್ಕಳ ಕಾಂಗ್ರೆಸ್ ನಲ್ಲಿ ಇದೀಗ ಟಿಕೆಟ್ ಹಂಚಿಕೆಯದ್ದೇ ಮಾತು.ಯಾರಿಗೆ ಟಿಕೆಟ್ ಸಿಗಬಹುದು ಎಂಬ ಕುತೂಹಲ ಕಾಂಗ್ರೆಸ್ ಮಾತ್ರವಲ್ಲದೆ ಇಡೀ ಕಾರ್ಕಳದ ಜನತೆಯಲ್ಲಿ ಮನೆಮಾಡಿದೆ‌.

ಬಂಟರ ಕಾದಾಟ : ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಬಿಲ್ಲವ ಟಿಕೆಟ್ ಖಚಿತ ಆಗಿರುವುದರಿಂದ ಕಾರ್ಕಳದಲ್ಲಿ ಬಂಟರಿಗೇ ಟಿಕೆಟ್ ಆಗಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ನ ನಿಲುವು.ಕಾಂಗ್ರೆಸ್ ನಲ್ಲಿ ಪ್ರಬಲ ಬಂಟ ಅಭ್ಯರ್ಥಿಗಳು ಇಲ್ಲವೆಂದಲ್ಲ ಇದ್ದವರೆಲ್ಲ ಯಾರು?ಪಕ್ಷಕ್ಕೆ ಅವರ ಕೊಡುಗೆ ಏನು? ಕಾರ್ಕಳದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಶಕ್ತರೇ? ಎಂಬುದು ಹೈಕಮಾಂಡ್ ತಲೆ ನೋವಾಗಿದೆ

ಉದಯ್ ಕುಮಾರ್ ಶೆಟ್ಟಿ : ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಕೇವಲ ಕಾರ್ಕಳ ಕಾಂಗ್ರೆಸ್ ಮಾತ್ರವಲ್ಲ ಇಡೀ ಕಾರ್ಕಳದಲ್ಲಿಯೇ ಪ್ರಬಲ ಬಂಟ ನಾಯಕ.ಬಹುಶಃ ಉದಯ್ ಶೆಟ್ಟಿ ಮಣಿಸಲು ವಿಪಕ್ಷ-ಸ್ವಪಕ್ಷ ಸೇರಿಸಿ ಪ್ರಯತ್ನಿಸುದರೂ ಜಗ್ಗದ ವ್ಯಕ್ತಿ.ಯಶಸ್ವಿ ಉದ್ಯಮಿಯಾಗಿ ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಉದಯ್ ಶೆಟ್ಟಿಗೆ ಅದ್ಯಾರು ಕಿವಿಗೆ ಗಾಳಿ ಊದಿದರೋ ಗೊತ್ತಿಲ್ಲ‌. ಕಳೆದ ಬಾರಿ ಕಾರ್ಕಳದಲ್ಲಿ ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸುವ ಮನಸ್ಸಾಯಿತು. ಮನೆ ಮನೆಗೆ ಕಾಂಗ್ರೇಸ್ ಕಾರ್ಯಕ್ರಮದ ಮೂಲಕ ಪ್ರತಿ ಮನೆ ಮನೆಗೂ ಕಾಂಗ್ರೇಸ್ ಪಕ್ಷದ ಕೆಲಸಗಳನ್ನು ತಲುಪಿಸುವ ಮೂಲಕ ತಳ ಮಟ್ಟದ ಕಾರ್ಯಕರ್ತರವರನ್ನು, ಮತದಾರರನ್ನು ತಲುಪಿದ ಹೆಗ್ಗಳಿಕೆಗೆ ಪಾತ್ರರಾಗಿ ಕಾಂಗ್ರೆಸ್ ಪಕ್ಷದ ಕಟ್ಟಾಳಾದ ಕೀರ್ತಿ ಮೊಯಿಲಿ ಭಂಡಾರಿಯ ನಂತರ ಅದು ಉದಯ್ ಶೆಟ್ಟಿ ಎಂದರೆ ತಪ್ಪಾಗಲಾರದು. ಬಿಜೆಪಿಯನ್ನೇ ಅವಲಂಬಿಸಿದ್ದ ಯುವಕರು ಉದಯ್ ಕುಮಾರ್ ಶೆಟ್ಟಿಯ ಜೊತೆ ಕಾಣಿಸಿಕೊಳ್ಳತೊಡಗಿದರು.ಸುನೀಲ್ ಕುಮಾರ್ ಹೊಡೆತಕ್ಕೆ ನಲುಗಿದ್ದ ಕಾಂಗ್ರೆಸ್ ನಲ್ಲಿ ಮತ್ತೆ ಚೈತನ್ಯ ತುಂಬಿಸಿದ್ದು ಉದಯ್ ಕುಮಾರ್ ಶೆಟ್ಟಿ.

ಆದರೆ ಎಲ್ಲವೂ ಚೆನ್ನಾಗಿದ್ದ ಸಮಯದಲ್ಲಿ ಕೊನೇ ಕ್ಷಣದಲ್ಲಿ ಉದಯ್ ಕುಮಾರ್ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಬೆಂಬಲಿಗರ ಆಕ್ರೋಶ ಕೈ ಮೀರಿ ಮೊಯಿಲಿಗೆ ದಿಕ್ಕಾರ ಕೂಗಿದರು.ಕಾರ್ಕಳ ಕಾಂಗ್ರೆಸ್ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದುಕೊಂಡಿದ್ದ ಮೊಯಿಲಿಗೆ ಕಾರ್ಕಳದಲ್ಲಿಯೇ ಮುಖಭಂಗ ಆಯಿತು. ಆವತ್ತು ಮೊಯಿಲಿಗೆ ದಿಕ್ಕಾರ ಕೂಗಿದವರು ಇವತ್ತು ಕಾಂಗ್ರೆಸ್ ನಲ್ಲಿಯೇ ದೊಡ್ಡ ಹುದ್ದೆಯಲ್ಲಿದ್ದಾರೆ,ಆ ಮಾತು ಬಿಡಿ. ಆದರೆ ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದು ಮಾತ್ರ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಯವರು.

ಸುರೇಂದ್ರ ಶೆಟ್ಟಿ: ಸಹನಾ ಸಂಸ್ಥೆಯ ಮಾಲಕ.ಯಶಸ್ವಿ ಉದ್ಯಮಿ. ಬಂಟ ಸಮುದಾಯದಲ್ಲಿ ಬೆಳೆಯುತ್ತಿರುವ ನಾಯಕ. ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರನಾಗಿದ್ದವರು, ಜಂಟಲ್ ಮ್ಯಾನ್ ಎಂದರೆ ತಪ್ಪಾಗಲಾರದು. ಕಾರ್ಕಳದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಸೋತು ಕುಂದಾಪುರದಲ್ಲಿ ಉದ್ಯಮವನ್ನು ನಡೆಸಿಕೊಂಡು ಕಾಂಗ್ರೆಸ್ ಸಹವಾಸ ಬೇಡವೆಂದು ತನ್ನ ಪಾಡಿಗೆ ಇದ್ದ ವ್ಯಕ್ತಿ.

ಅದ್ಯಾರ ಒತ್ತಡವೋ ಪ್ರಚೋದನೇಯೋ ತುರ್ತು ತುರ್ತಾಗಿ ಕೆಪಿಸಿಸಿ ಸದಸ್ಯನಾಗಿ ‌ಕಾರ್ಕಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆದರು. ಎರಡು ಲಕ್ಷ ಪಾವತಿಸಿ ಅರ್ಜಿಯನ್ನು ಹಾಕಿದರು .ಕಾಂಗ್ರೆಸ್ ಕಾರ್ಕಳದಲ್ಲಿ ಬಂಟರಿಗೆ ಟಿಕೆಟ್ ನೀಡುವುದು ಪಕ್ಕಾ ಆದರೆ ಕಾರ್ಯಕರ್ತ ಪರಿಚಯವೇ ಇಲ್ಲದ ಸುರೇಂದ್ರ ಶೆಟ್ಟಿಗೆ ಟಿಕೆಟ್ ನೀಡುವುದೇ ಎಂಬುದು ಪ್ರಶ್ನೆ.? ಚುನಾವಣೆಗೆ ಸುನೀಲ್ ಕುಮಾರ್ ಗಿಂತ ಒಂದು ಪಟ್ಟು ಹೆಚ್ಚು ಖರ್ಚು ಮಾಡಬಲ್ಲ ಕೆಪ್ಯಾಸಿಟಿ ಇರುವ ಸುರೇಂದ್ರ ಶೆಟ್ಟಿ ಸುನೀಲ್ ವಿರುದ್ದ ಪ್ರಬಲ ಪ್ರತಿಸ್ಪರ್ಧಿ ಅಲ್ಲವೆಂದು ಸ್ವತಃ ಕಾಂಗ್ರೆಸ್ ನವರೇ ಹೇಳುತ್ತಾರೆ.ಈ ಮಧ್ಯೆ ಬಂಟ ಲಾಭಿ ಮಾಡೋಣವೆಂದರೆ ಸುರೇಂದ್ರ ಶೆಟ್ಟಿ ನಮ್ಮವ ಎಂದು ಸುನೀಲ್ ಕುಮಾರ್ ವಿರುದ್ದ ಕಾಲರ್ ಮೇಲೆತ್ತುವ ಬಂಟರನ್ನು ಟಾರ್ಚ್ ಹಾಕಿ ಹುಡುಕಬೇಕಷ್ಟೇ!

ಸುರೇಂದ್ರ ಮೊಯಿಲಿಯ ಬಲಿಪಶು.ರಾಜಕೀಯವಾಗಿ ಅಪ್ರಭುಧ್ದ ಎಂದರೆ ತಪ್ಪಾಗಲಾರದು.ಸುರೇಂದ್ರ ಶೆಟ್ಟಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮೊದಲು ದುಡಿಯಲಿ ಎಂದು ಕಾರ್ಯಕರ್ತರೇ ಹೇಳಿದ್ದಾರೆ ಎಂಬುವು ಇತ್ತೀಚೆಗೆ ಪಕ್ಷದ ಕಾರ್ಯಕ್ರಮದಲ್ಲಿ ಕೇಳಿ ಬಂದ ಸುದ್ದಿ

ಸುಪ್ರಿತ್ ಶೆಟ್ಟಿ ಕೆದಿಂಜೆ: ಮಿ.ಕೆದಿಂಜೆ ಎಂದೇ ಜನಜನಿತರಾದ ಸುಪ್ರಿತ್ ಶೆಟ್ಟಿ ಕೆದಿಂಜೆ ಬಗ್ಗೆ ಹೆಚ್ಚೇನೋ ಹೇಳಬೇಕಾಗಿಲ್ಲ. ಜನರೇ ಎಲ್ಲ ಹೇಳುತ್ತಾರೆ. ಕಾಂಗ್ರೆಸ್ ನಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಅಡಿಪಾಯವಾದ ಗ್ರಾಮ ಪಂಚಾಯತ್ ನಲ್ಲಿ ಮೂರು ಬಾರಿ ಸದಸ್ಯನಾಗಿ ಒಂದು ಅವದಿಗೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಉತ್ತಮ ಆಡಳಿತ ನಡೆಸಿ ಅಪಾರ ಜನಮನ್ನಣೆ ಗಳಿಸಿದ ಸುಪ್ರಿತ್ ಶೆಟ್ಟಿ ಕೆದಿಂಜೆ ಕಾಂಗ್ರೆಸ್ ಪಕ್ಷದ ಕಟ್ಟಾಳು.ಚುನಾವಣೆಗೆ ನಿಂತರೆ ಸಾಕು ಜನರೇ ಗೆಲ್ಲಿಸುವ ಸೋಲಿಲ್ಲದ ಸರದಾರ.ಮೊಯಿಲಿಯವರ ಶಿಷ್ಯನಾಗಿ ಭಂಡಾರಿಯವರ ಆಪ್ತನಾಗಿ ಅವರಂತೆಯೇ ಸರಳ ಸಜ್ಜನಿಕೆಯಲ್ಲಿ ಬದುಕುತ್ತಿರುವ ವ್ಯಕ್ತಿ.ಸೈಲೆಂಟ್ ಆಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ನಾಯಕ.ಇವರಿಗೆ ಟಿಕೆಟ್ ನೀಡಿದರೆ ಪ್ರತಿಯೊಬ್ಬ ಕಾರ್ಯಕರ್ತನಿಗೆ ಗೌರವ ನೀಡಿದ ಹಾಗೆ. ಕಾಂಗ್ರೆಸ್ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ಕಾರ್ಯಕರ್ತರ ಸಾಮಾನ್ಯ ಜನರ ಒಲವು ಇವರ ಪರವಾಗಿ ಇದೆ. ಕೊನೆ ಕ್ಷಣದಲ್ಲಿ ಇಬ್ಬರ ಜಗಳ ಮೂರನೇ ಯವನಿಗೆ ಲಾಭ ಎಂಬಂತೆ ಸುಪ್ರೀತ್ ಶೆಟ್ಟರು ಇಬ್ಬರು ಶ್ರೀಮಂತ ಬಂಟರ ಕಾಳಗದ ಲಾಭ ಪಡೆದು ಕಾಂಗ್ರೇಸ್ ಟಿಕೆಟ್ ಗಿಟ್ಟಿಸಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ.!

Related Articles

Leave a Reply

Your email address will not be published. Required fields are marked *

Back to top button
error: Content is protected !!