ಕರಾವಳಿ

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ(ರಿ.) ಕಲ್ಮಾಡಿ : ಸಾಧಕರಿಗೆ ಗೌರವಾರ್ಪಣೆ

ಶ್ರೀ ಬ್ರಹ್ಮ ಬೈದೇರುಗಳ ಗರೋಡಿ(ರಿ.) ಕಲ್ಮಾಡಿ ಇದರ 15ನೇ ವರ್ಷದ ಪ್ರತಿಷ್ಠಾ ವರ್ಧಂತ್ಯೋತ್ಸವ ಹಾಗೂ ನೇಮೋತ್ಸವದ ಅಂಗವಾಗಿ ಗರೋಡಿಯ ಪದಾಧಿಕಾರಿ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಗರೋಡಿಯ ಆಡಳಿತ ಸಮಿತಿಯ ಅಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ಯವರ ಅಧ್ಯಕ್ಷತೆಯಲ್ಲಿ ಗರೋಡಿಯ ಪ್ರಾಂಗಣದಲ್ಲಿ ಜರಗಿತು.

ಬಿಲ್ಲವರ ಸಮಾಜ ಸೇವಾ ಸಂಘ(ರಿ.) ಮಲ್ಪೆ ಇದರ ಶತಮಾನೋತ್ಸವ ವರ್ಷದ ಆಡಳಿತ ಸಮಿತಿಯ ಅಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ್ ಸಿ. ಬಂಗೇರ, ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ ಗೋವಾ ಇದರ ಆಡಳಿತ ಸಮಿತಿ ಸದಸ್ಯ ಹಾಗೂ ಬಿಲ್ಲವ ಸೇವಾ ಸಂಘ(ರಿ.) ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಪ್ರಭಾರ ಅಧ್ಯಕ್ಷ ಎ.ಶಿವಕುಮಾರ್ ಅಂಬಲಪಾಡಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿ(ರಿ.), ಕಿದಿಯೂರು ಇದರ ಅಧ್ಯಕ್ಷ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ(ರಿ.) ಆದಿವುಡುಪಿ ಇದರ ವಿಶ್ವಸ್ಥ ಹರೀಶ್ ಎಮ್.ಕೆ., ಕಲ್ಮಾಡಿ ಇವರನ್ನು ಗರೋಡಿಯ ಆಡಳಿತ ಸಮಿತಿಯ ವತಿಯಿಂದ ಶಾಲು ಹೊದೆಸಿ, ಶ್ರೀ ಬ್ರಹ್ಮ ಬೈದೇರುಗಳ ಗಂಧ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗರೋಡಿಯ ಸನ್ನುದ್ದಾರ ರಾಮಚಂದ್ರ ಕಿದಿಯೂರು, ಕೊಡವೂರು ಮಹತೋಭಾರ ಶ್ರೀ ಶಂಕರ ನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗರೋಡಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷ ಶಶಿಧರ್ ಎಮ್. ವಡಭಾಂಡೇಶ್ವರ, ಗರೋಡಿ ಮನೆ ನಾರಾಯಣ ಪೂಜಾರಿ, ನಾಲ್ಕರೆ ಗುರಿಕಾರ ವಿಠ್ಠಲ ಪೂಜಾರಿ, ಗರೋಡಿಯ ಅರ್ಚಕ ರಾಘವ ಪೂಜಾರಿ ಮತ್ತು ಆಡಳಿತ ಸಮಿತಿಯ ಪದಾಧಿಕಾರಿಗಳು, ಸಮಿತಿ ಸದಸ್ಯರು, ಗರೋಡಿ ಮನೆಯವರು, ಕೂಡುಕಟ್ಟಿನ ಗುರಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಗರೋಡಿಯ ಆಡಳಿತ ಸಮಿತಿಯ ಕೋಶಾಧಿಕಾರಿ ಬಾಲಕೃಷ್ಣ ಕೊಡವೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾವಿರಾರು ಮಂದಿ ಭಕ್ತಾದಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!