ರಾಜ್ಯ

ಅನಾರೋಗ್ಯದಿಂದ ನಿಧನರಾದ ಖ್ಯಾತ ಆಹಾರ ತಜ್ಞ ಕೆಸಿ ರಘು

ಬೆಂಗಳೂರು: ಖ್ಯಾತ ಆಹಾರ ತಜ್ಞ ಕೆಸಿ ರಘು ಅವರು ಭಾನುವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರಘು ಅವರ ಪತ್ನಿ, ನನ್ನ ಪತಿ ಕೆಸಿ ರಘು ಅವರು ಇಂದು ಬೆಳಗ್ಗೆ ಸುಮಾರು 7:30ಕ್ಕೆ ನಮ್ಮನ್ನು ಅಗಲಿದ್ದಾರೆ. ಅಂತಿಮ ದರ್ಶನ ಮಾಡಲು ಇಚ್ಛಿಸುವವರು ಈ ಕೆಳಗಿನ ವಿಳಾಸಕ್ಕೆ ಬರಬಹುದು.
ರಘು ಕೆಸಿ ಎ-403, 4ನೇ ಮಹಡಿ, ಬ್ರಿಗೇಡ್ ಕ್ಯಾಲಡಿಯಮ್, ದಾಸರಹಳ್ಳಿ ಮುಖ್ಯ ರಸ್ತೆ, ಅಮೃತನಗರ, ದಾಸರಹಳ್ಳಿ, ಬೆಂಗಳೂರು -560024 ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಆಹಾರದ ವಿಚಾರದಲ್ಲಿ ಸಾಕಷ್ಟು ಸ್ಪಷ್ಟ ಮಾಹಿತಿ ನೀಡುತ್ತಿದ್ದ ರಘು ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದೀಗ ಅನಾರೋಗ್ಯದಿಂದಾಗಿ ನಿಧನರಾದ ಕೆಸಿ ರಘು ಅವರಿಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!