ಕರಾವಳಿ

ಪ್ರಧಾನಿ ನರೇಂದ್ರ ಮೋದಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನಮಿಸಿ ರೋಡ್ ಶೋ ಶುರು ಮಾಡುತ್ತಿರುವ ಸುದ್ದಿ ಬಹಳಷ್ಟು ಚರ್ಚಾಸ್ಪದ !!!

ಗೌರವಾನ್ವಿತ ಪ್ರಧಾನಿಗಳು ಮಂಗಳೂರಿನ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನಮಿಸಿ ರೋಡ್ ಶೋ ಶುರು ಮಾಡುತ್ತಿರುವ ಸುದ್ದಿ ಬಹಳಷ್ಟು ಚರ್ಚಾಸ್ಪದವಾಗಿದೆ.ಇದಕ್ಕೆ ಕಾರಣವನ್ನು ತಮ್ಮವರಿಂದ ತಾವು ತಿಳಿದುಕೊಳ್ಳುವುದೇ ಸಮಂಜಸವಾಗಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಲೋಕಮಾನ್ಯ ನಾರಾಯಣ ಗುರುಗಳ ಟ್ಯಾಬ್ಲೋವನ್ನು ನಿರಾಕರಿಸಿದಾಗ ಮತ್ತು ಗುರುಗಳ ಪಠ್ಯವನ್ನು ತೆಗೆದು ಹಾಕಿದಾಗ ಅವಿಭಜಿತ ಜಿಲ್ಲೆಯವರು ಹಾಗೂ ನಾರಾಯಣ ಗುರು ಅನುಯಾಯಿಗಳು ನ್ಯಾಯಯುತ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ನಿಮ್ಮ ಸಂಸದರಾಗಲಿ ,ಶಾಸಕರಾಗಲಿ ಚಕಾರವೆತ್ತಲಿಲ್ಲ. ಬಹಳಷ್ಟು ಒತ್ತಾಯಪೂರ್ವಕ ಮನವಿಯನ್ನು ಮಾಡಿರುವುದಕ್ಕೆ ಶ್ರೀ ನಾರಾಯಣಗುರು ನಿಗಮವನ್ನು ಸ್ಥಾಪಿಸಿದರೂ ಅನುದಾನವನ್ನೆ ನೀಡಲಿಲ್ಲ.

ಗುರುಗಳಿಗೆ ಆದ ಅಗೌರವದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಶಾಸಕರು, ಸಂಸದರು ಮತ್ತು ಯಾವುದೇ ಜನಪ್ರತಿನಿಧಿಗಳು ಆ ಬಗ್ಗೆ ಮೌನವಾಗಿದ್ದು, ಇದಕ್ಕೆ ಪೂರಕ ಬೆಂಬಲ ಎಂಬಂತೆ ಪ್ರಧಾನ ಮಂತ್ರಿಗಳು ಕೂಡ ಗುರುಗಳ ವಿಚಾರದಲ್ಲಿ ಕಿಂಚಿತ್ತು ಗೌರವ ತೋರದೆ ಸಮಸ್ತ ಬಿಲ್ಲವ ಸಮಾಜ ಮತ್ತು ಗುರುಗಳ‌ ಅನುಯಾಯಿಗಳನ್ನು ಕಡೆಗಣಿಸಿದ್ದು ಇದರಿಂದ ಗುರುಗಳಿಗೆ ಆದ ಅಗೌರವವನ್ನು‌ ಮರೆಯುವಂತಿಲ್ಲ. ಅದ್ದರಿಂದ ಲೋಕಸಭಾ ಚುನಾವಣೆಯ ಸಂದರ್ಭ ಮಂಗಳೂರಿಗೆ ತಮ್ಮ ಆಗಮನ ಚರ್ಚಾಸ್ಪದವಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಉಡುಪಿ ಅಧ್ಯಕ್ಷರಾದ ಪ್ರವೀಣ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!